Job Description: * ಇತ್ತೀಚಿಗೆ ಟರ್ಕಿ ದೇಶದಲ್ಲಿ ತೀವ್ರ ಆರ್ಥಿಕ ಹಣದುಬ್ಬರ ಪ್ರಮಾಣ ದಾಖಲೆ ಮಟ್ಟವನ್ನು ತಲುಪಿದೆ ಈ ಹಿನ್ನಲೆಯಿಂದಾಗಿ ಇದೀಗ ಆ ದೇಶದ ವಿತ್ತ ಸಚಿವರನ್ನು ಬದಲಾಯಿಸಿ ಎಂದು ಅಲ್ಲಿನ ಅಧ್ಯಕ್ಷ ರಿಸೆಪ್ ಎರ್ದೋಗನ್ ಆದೇಶವನ್ನು ನೀಡಿದ್ದಾರೆ. * ಪ್ರಸ್ತುತ ವಿತ್ತ ಸಚಿವರಾಗಿದ್ದ ಲುತ್ಫಿ ಎಲ್ವಾನ್ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ, ಅಷ್ಟೇ ಅಲ್ಲದೇ ಸಹಾಯಕ ವಿತ್ತಸಚಿವರಾಗಿರುವ ನರೆದ್ದೀನ್ ನೆಬಾಟಿ ಅವರನ್ನು ನೂತನ ವಿತ್ತ ಸಚಿವರನ್ನಾಗಿ ನೇಮಕಮಾಡಲಾಗಿದೆ ಎಂದು ಅಧ್ಯಕ್ಷರು ಆದೇಶವನ್ನು ಹೊರಡಿಸಿದ್ದಾರೆ. * ಅಮೇರಿಕದ ಡಾಲರ್ ಎದುರು ಇದೆ ವರ್ಷದಲ್ಲಿ ಟರ್ಕಿಯ ಕರೆನ್ಸಿ ಲಿರಾದ ಮುಖಬೆಲೆ 40%ಕ್ಕೂ ಹೆಚ್ಚಿನ ಕುಸಿತವನ್ನು ಕಂಡಿದೆ, ಅಷ್ಟೇ ಅಲ್ಲದೇ ಇದೀಗ ಈ ಕರೆನ್ಸಿಯು ವಿಶ್ವದ ಅಭಿವೃದ್ಧಿಶೀಲ ದೇಶಗಳ ಮಾರುಕಟ್ಟೆಯಲ್ಲಿನ ಕರೆನ್ಸಿಗಿಂತ ಕಳಪೆ ನಿರ್ವಹಣೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.