Job Description: * ಪ್ರಸ್ತುತ ದೆಹಲಿ ಸರ್ಕಾರವು 'ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆ' ಎಂಬ ತನ್ನ ತೀರ್ಥಯಾತ್ರೆಗೆ ಪಾಕಿಸ್ತಾನದ ಕರ್ತಾರ್ಪುರ ಸಾಹಿಬ್ ಹಾಗೂ ತಮಿಳುನಾಡಿನ ವೇಲಂಕಣಿ ಚರ್ಚ್'ನ್ನು ಸೇರಿಸಲು ಘೋಷಣೆ ಮಾಡಿದೆ. * ದೆಹಲಿ ಸರ್ಕಾರವು 2021 ರ ಜನವರಿ 5 ರಂದು ನಗರದ ಹಿರಿಯ ನಾಗರಿಕರ ಮೊದಲ ಬ್ಯಾಚ್'ನ್ನು ಕರ್ತಾರ್ಪುರ ಸಾಹಿಬ್ಗೆ ಉಚಿತ ತೀರ್ಥಯಾತ್ರೆಗೆ ಕಳುಹಿಸಿಕೊಡಲಿದೆ ಎಂದು ತಿಳಿದು ಬಂದಿದೆ. * ಹಾಗೆಯೇ ಜನೇವರಿ. 7 ರಂದು ನಗರದ ಹಿರಿಯ ನಾಗರಿಕರ ಮೊದಲ ಬ್ಯಾಚ್'ನ್ನು ವೇಲಂಕಣಿ ಚರ್ಚ್ಗೆ ಕಳುಹಿಸಿಕೊಡಲಿದೆ. * ಇದೀಗ 13 ಯಾತ್ರಾ ಮಾರ್ಗಗಳ ಹೊರತಾಗಿ ಈ ಎರಡು ಹೊಸ ಮಾರ್ಗಗಳನ್ನು ಸೇರಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ, ಅವುಗಳೇ ದೆಹಲಿ-ವೇಲಂಕಣಿ, ಹಾಗೂ ದೆಹಲಿ-ಕರ್ತಾರಪುರ ಸಾಹಿಬ್. * ದೆಹಲಿ ಸರ್ಕಾರವು ಈ ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆಯನ್ನು ಆರಂಭಿಸಿದೆ, ಇದರಡಿಯಲ್ಲಿ ದೆಹಲಿಯ ಹಿರಿಯ ನಾಗರಿಕರಿಗೆ 5 ಧಾರ್ಮಿಕ ಸ್ಥಳಗಳಿಗೆ ಉಚಿತ ಪ್ರಯಾಣದ ಪ್ಯಾಕೇಜ್ಗಳನ್ನು ನೀಡಲಿದೆ. * ಈ ಯೋಜನೆಯ ಪ್ರಯೋಜನವನ್ನು 60 ವರ್ಷಕ್ಕಿಂತ ಮೇಲ್ಪಟ್ಟ ದೆಹಲಿ ನಿವಾಸಿಗಳು ತಮ್ಮ ಸಂಗಾತಿಯ ಜೊತೆಗೆ ಈ ಉಚಿತ ತೀರ್ಥಯಾತ್ರೆಗೆ ಅರ್ಹರಾಗಿರುತ್ತಾರೆ, ಆದರೆ ಸ್ಥಳೀಯ, ರಾಜ್ಯ ಮತ್ತು ಕೇಂದ್ರ ಸರ್ಕಾರ ಅಥವಾ ಸ್ವಾಯತ್ತ ಸಂಸ್ಥೆಗಳ ನೌಕರರು ಈ ಯೋಜನೆಗೆ ಅರ್ಹರಾಗಿರುವದಿಲ್ಲ. * ಪ್ರಸ್ತುತ ಈ ಯೋಜನೆ ಆರಂಭವಾದಾಗಿನಿಂದ ಇಲ್ಲಿಯತನಕ 35080 ಫಲಾನುಭವಿಗಳು ಪ್ರಯಾಣ ಬೆಳೆಸಿದ್ದಾರೆ.