Job Description: * ಪ್ರಸ್ತುತ ಇಂಡೋ - ಫ್ರಾನ್ಸ್ ದೇಶಗಳ 'ಎಕ್ಸ್ ಶಕ್ತಿ- 2021' ಎಂಬ ದ್ವೈವಾರ್ಷಿಕ ಜಂಟಿ ಮಿಲಿಟರಿ ವ್ಯಾಯಾಮದ 6ನೇ ಆವೃತ್ತಿಯು ಇದೇ ನವೆಂಬರ್. 26 ರಂದು ಫ್ರಾನ್ಸ್ನಲ್ಲಿ ಕೊನೆಗೊಂಡಿದೆ. * ಈ 'ಎಕ್ಸ್ ಶಕ್ತಿ 2021'ಯು 12 ದಿನಗಳ ಜಂಟಿ ಮಿಲಿಟರಿ ತರಬೇತಿಯನ್ನು ಹೊಂದಿತ್ತು, ಈ ವ್ಯಾಯಾಮದಲ್ಲಿ ಉಭಯ ದೇಶಗಳ ತಮ್ಮ ಯುದ್ಧ ಶಕ್ತಿ ಮತ್ತು ಪ್ರಾಬಲ್ಯವನ್ನು ಎತ್ತಿ ತೋರಿಸಿದವು. * ಎಕ್ಸ್ ಶಕ್ತಿಯು ವ್ಯಾಯಾಮವು ವಿಶ್ವಸಂಸ್ಥೆಯ ಆದೇಶದ ಅಡಿಯಲ್ಲಿ ಅರೆ-ನಗರ ಭೂಪ್ರದೇಶದ ಬೆಳಕಿನಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳ ಮೇಲೆ ಕೇಂದ್ರೀಕರಿಸಲಿದೆ, ಹಾಗೂ ಉಭಯ ದೇಶಗಳ ಸೇನೆಗಳ ನಡುವೆ ಮಿಲಿಟರಿ ಸಹಕಾರ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ವೃದಿಸುವ ನಿಟ್ಟಿನಲ್ಲಿ ಇದನ್ನು ದ್ವೈವಾರ್ಷಿಕವಾಗಿ ಆಯೋಜಿಸಲಾಗಿದೆ. * ಈ ಜಂಟಿ ಮಿಲಿಟರಿ ವ್ಯಾಯಾಮವನ್ನು ಭಾರತ ಮತ್ತು ಫ್ರಾನ್ಸ್ನಲ್ಲಿ ಪರ್ಯಾಯವಾಗಿ ನಡೆಸಲು 2011 ರಲ್ಲಿ ಆರಂಭಿಸಲಾಗಿದೆ. * ಈ ಜಂಟಿ ಮಿಲಿಟರಿ ವ್ಯಾಯಾಮದ 5 ನೇ ಆವೃತ್ತಿಯು 2019 ರಾಜಸ್ಥಾನದಲ್ಲಿ ಜರುಗಿದೆ, ಎರಡು ದೇಶಗಳ ಸೇನೆಗಳು 'ಅರೆ ಮರುಭೂಮಿ ಭೂಪ್ರದೇಶದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳನ್ನು' ಹಮ್ಮಿಕೊಂಡಿದ್ದವು. * ಭಾರತ ಮತ್ತು ಫ್ರಾನ್ಸ್ ದೇಶಗಳು ಈ ಕೆಳಗಿನ ರಕ್ಷಣಾ ವ್ಯಾಯಾಮಗಳನ್ನು ನಡೆಸುತ್ತವೆ: - ವರುಣ, ಇದು ನೌಕಾ ವ್ಯಾಯಾಮ, - ಡೆಸರ್ಟ್ ನೈಟ್-21, - ಗರುಡ, ವಾಯು ವ್ಯಾಯಾಮ.