Job Description: * ಆಯುರ್ವೇದ ಪರ್ವ್-2021'ನ್ನು ಆಯುಷ್ನ ರಾಜ್ಯ ಸಚಿವ ಮುಂಜ್ಪಾರಾ ಮಹೇದ್ರಾಭಾಯಿ ಅವರು ನವದೆಹಲಿಯಲ್ಲಿ ಇದರ ಉದ್ಘಾಟನೆಯನ್ನು ನೆರವೇರಿಸಿದರು. * ಆಯುರ್ವೇದ ಪರ್ವ್-2021'ವು ಮೂರು ದಿನಗಳ ಕಾರ್ಯಕ್ರಮವಾಗಿದೆ, ಈ ಕಾರ್ಯಕ್ರಮದಲ್ಲಿ ಆಯುರ್ವೇದವನ್ನು ಉತ್ತೇಜಿಸಲಾಗುವುದು ಎಂದು ತಿಳಿಸಿದ್ದಾರೆ, ಹಾಗೂ ಔಷಧೀಯ ಕಂಪನಿಗಳ ಪಾಲ್ಗೊಳ್ಳುವಿಕೆ ಮತ್ತು 40 ಮಳಿಗೆಗಳನ್ನು ಒಳಗೊಂಡ ವಸ್ತುಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. * ಆಯುರ್ವೇದ ಪರ್ವ್'ವು ಜನಸಾಮಾನ್ಯರಲ್ಲಿ ಆಯುರ್ವೇದದ ಹೆಚ್ಚಿನ ಸ್ವೀಕಾರವನ್ನು ಬಲಪಡಿಸಲು ಹಾಗೂ ಜೀವನಶೈಲಿ ರೋಗಗಳಿಗೆ ಆಯುರ್ವೇದವನ್ನು ಮುಖ್ಯ ಚಿಕಿತ್ಸೆಯಾಗಿ ಬಳಸಲು ಈ ಕಾರ್ಯಕರಮವನ್ನು ನಿಯೋಜಿಸಲಾಗಿದೆ. * ಆಯುರ್ವೇದ ಇದೊಂದು ಭಾರತೀಯ ಉಪಖಂಡದಲ್ಲಿ ಅದರದೇ ಆದ ಐತಿಹಾಸಿಕ ಬೇರುಗಳನ್ನು ಒಳಗೊಂಡಿರುವ ಪುರಾತನ ಔಷಧ ವ್ಯವಸ್ಥೆಇದಾಗಿದೆ. * ಪ್ರಸ್ತುತ ಭಾರತ ಹಾಗೂ ನೇಪಾಳ ದೇಶಗಳಲ್ಲಿ ಆಯುರ್ವೇದವನ್ನು ಅತೀ ಹೆಚ್ಚಾಗಿ ಅಭ್ಯಾಸ ಮಾಡಲಾಗುತ್ತದೆ, ಅಷ್ಟೇ ಅಲ್ಲದೇ ಇಲ್ಲಿನ ಜನಸಂಖ್ಯೆಯ 80% ಜನರು ರೋಗಗಳನ್ನು ಗುಣಪಡಿಸಲು ಆಯುರ್ವೇದ ಔಷಧ ವ್ಯವಸ್ಥೆಯನ್ನು ಬಳಸಲಾಗುತ್ತದೆ ಎಂದು ತಿಳಿದು ಬಂದಿದೆ. * ಭಾರತ ಸರ್ಕಾರವು 2014 ರ ನವೆಂಬರ್. 9 ರಂದು ಆಯುರ್ವೇದದ ಆಯುಷ್ ಸಚಿವಾಲಯವನ್ನು ಸ್ಥಾಪಿಸಿದೆ, ಹಾಗೂ ಇದು ಧನ್ವಂತರಿಯ ಜನ್ಮವನ್ನು ಸೂಚಿಸುವ ಧನ್ತೇರಸ್ನಲ್ಲಿ 'ರಾಷ್ಟ್ರೀಯ ಆಯುರ್ವೇದ ದಿನ'ವನ್ನು ಆಚರಣೆ ಮಾಡಲಾಗುತ್ತದೆ.