Job Description: * ಇತ್ತೀಚಿಗೆ ಬಿಹಾರ ರಾಜ್ಯದಲ್ಲಿನ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಗೆ ಅಲ್ಲಿನ ಪೋಕ್ಸೊ ನ್ಯಾಯಾಲಯ ತನಿಕೆ ನಡೆಸಿ ಜೀವಾವಧಿ ಶಿಕ್ಷೆಯನ್ನು ನೀಡಿದೆ, ವಿಶೇಷವೆಂದರೇ ಪೋಕ್ಸೊ ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು ಒಂದೇ ದಿನದಲ್ಲಿ ಮುಕ್ತಾಯಗೊಳಿಸಿ ತೀರ್ಪು ನೀಡಿದೆ. * ದೇಶದಲ್ಲಿ ಈ ಪ್ರಕರಣಕ್ಕೆ ಅತ್ಯಂತ ವೇಗೆವಾಗಿ ವಿಚಾರಣೆ ನಡೆಸಿ ತೀರ್ಪು ನೀಡಲಾಗಿದೆ ಎಂದು ತಿಳಿಸಿದ್ದಾರೆ, ಅಷ್ಟೇ ಅಲ್ಲದೇ ಪ್ರಕರಣದ ಅಪರಾಧಿಗೆ 50,000 ರೂ. ದಂಡ ವಿಧಿಸಿದರು, ಹಾಗೂ ಬಾಲಕಿಯ ಪುನರ್ವಸತಿಗಾಗಿ 7 ಲಕ್ಷ ರೂ. ನೀಡಬೇಕು ಎಂದು ಆದೇಶಿಸಿದೆ. * ಈ ಹಿಂದೆ ಮಧ್ಯಪ್ರದೇಶದ ದತಿಯಾ ಜಿಲ್ಲೆಯಲ್ಲಿನ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು, ಆ ಸಂಧರ್ಭದಲ್ಲಿ ಅಂದರೆ 2018 ರ ಆಗಸ್ಟ್ ತಿಂಗಳಿನಲ್ಲಿ ದತಿಯಾ ಜಿಲ್ಲಾ ನ್ಯಾಯಾಲಯವು ಈ ಪ್ರಕರಣ ವಿಚಾರಣೆಯನ್ನು ಕೇವಲ 3 ದಿನಗಳಲ್ಲಿ ಪೂರ್ಣಗೊಳಿಸಿ ತೀರ್ಪುನ್ನು ಪ್ರಕಟಿಸಿತ್ತು ಎಂಬ ಮಾಹಿತಿ ಇದೆ.