Job Description: * ಕೇಂದ್ರ ಸರ್ಕಾರವು ಅಂತರ್ಜಾತಿ ವಿವಾಹ(Inter Caste Marriage)ಗಳನ್ನು ಪ್ರೋತ್ಸಾಹಿಸುವಂತೆ, ಹಾಗೂ ಜಾತಿ ತಾರತಮ್ಯವನ್ನು ಕೊನೆ ಮಾಡುವ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. * ಅಸ್ಸಾಂ ಸರ್ಕಾರವು ಅಂತರ್ಜಾತಿ ವಿವಾಹಕ್ಕೆ ಬೆಂಬಲ ನೀಡಿ ಸಮಾಜದಲ್ಲಿ ಏಕತೆ ಮೂಡಿಸುವ ನಿಟ್ಟಿನಲ್ಲಿ ಸಾಮಾಜಿಕ ಸಾಮರಸ್ಯ ಪ್ರೋತ್ಸಾಹ ಮತ್ತು ಹಣಕಾಸಿನ ನೆರವು ನೀಡುವುದಾಗಿ ಘೋಷಣೆ ಮಾಡಿದೆ. * ಇದೀಗ ಅಸ್ಸಾಂ ಸರ್ಕಾರವು ಅಂತರ್ಜಾತಿ ವಿವಾಹ(Inter Caste Marriage)ಕ್ಕೆ ಸರ್ಕಾರದಿಂದ 5 ಲಕ್ಷ ರೂ. ಪ್ರೋತ್ಸಾಹ ಧನ ಸಿಗಲಿದೆ ಎಂದು ತಿಳಿಸಿದೆ. * ಪ್ರಸ್ತುತ ಅಂತರ್ಜಾತಿ ವಿವಾಹ ಯೋಜನೆಯಡಿ(Inter Caste Marriage Plan) ನೂತನ ದಂಪತಿಗಳಿಗೆ ಯಾವುದೇ ರೀತಿಯ ವ್ಯಾಪಾರ ಅಥವಾ ಉದ್ಯಮ ಆರಂಭಿಸಲು 10 ಸಾವಿರ ರೂ.ದಿಂದ 5 ಲಕ್ಷ ರೂ.ವರೆಗೂ ಸರ್ಕಾರವು ಪ್ರೋತ್ಸಾಹ ಧನ ನೀಡಲಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಅಸ್ಸಾಂ ಸರ್ಕಾರದ ಈ ಯೋಜನೆಯ ಲಾಭ ಪಡೆಯಲು ಫಲಾನುಭವಿಯು ಏಪ್ರಿಲ್ 2019 ರಿಂದ ಮಾರ್ಚ್ 2021ರ ನಡುವೆ ಮದುವೆಯಾಗಿರಬೇಕು ಎಂದು ತಿಳಿಸಿದೆ, ಅಷ್ಟೇ ಅಲ್ಲದೇ ಈ ಯೋಜನೆಯ ಲಾಭ ಪಡೆಯಲು ಸಂಗಾತಿಗಳಲ್ಲಿ ಒಬ್ಬರು ಪರಿಶಿಷ್ಟ ಜಾತಿಗೆ ಮತ್ತು ಇನ್ನೊಬ್ಬರು ಸಾಮಾನ್ಯ ಜಾತಿಗೆ ಸೇರಿರಬೇಕು ಎಂದು ಷರತ್ತು ಹಾಕಿದೆ.