Job Description: * ಈ ಹಿಂದೆ 2008 ರ ನವೆಂಬರ್. 26ರಂದು ಮಹಾರಾಷ್ಟ್ರದ ಮುಂಬೈ ನಗರದ ಮೇಲೆ ಭಯೋತ್ಪಾದಕರು ದಾಳಿಯನ್ನು ನಡೆಸಿದ್ದಾರೆ ಆ ದಾಳಿಯಲ್ಲಿ ಹುತಾತ್ಮರಾದವರಿಗೆ ಅಲ್ಲಿನ ಮಹಾರಾಷ್ಟ್ರ ಸರ್ಕಾರವು ಗೌರವ ಸಮರ್ಪಣೆಯನ್ನು ತಿಳಿಸಿದೆ. * ಈ ಹುತಾತ್ಮರಿಗೆ ಗೌರವ ಸಮರ್ಪಣೆಯಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರು ಅಲ್ಲಿನ ಸ್ಮಾರಕಗಳಿಗೆ ಗೌರವ ಸಮರ್ಪಣೆಯನ್ನು ತಿಳಿಸಿದರು. * ಈ ಹಿಂದೆ 2008 ನವೆಂಬರ್. 26 ರಂದು ಪಾಕಿಸ್ತಾನದಿಂದ 10 ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ಮುಂಬೈ ನಗರಕ್ಕೆ ಆಗಮಿಸಿ ಗುಂಡಿನ ದಾಳಿ ನಡೆಸಿದ್ದರು, ಆ ಸಂಧರ್ಭದಲ್ಲಿ ಮುಂಬೈಯ ತಾಜ್ ಹೊಟೇಲ್'ಗೆ ಮುತ್ತಿಗೆ ಹಾಕಿ ಅಲ್ಲಿನ 18 ಭದ್ರತಾ ಸಿಬ್ಬಂದಿ ಹಾಗೂ 166 ಸಾಮಾನ್ಯ ಜನರನ್ನು ಕೊಂದಿದ್ದರು. * ಆ ಉಗ್ರರ ದಾಳಿಯಲ್ಲಿ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ, ಭಾರತೀಯ ಸೇನಾ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಹಾಗೂ ಮುಂಬೈನ ಹೆಚ್ಚುವರಿ ಪೊಲೀಸ್ ಕಮಿಷನರ್ ಅಶೋಕ್ ಕಾಮ್ಟೆ, ಮತ್ತು ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ವಿಜಯ್ ಸಲಸ್ಕರ್, ಇವರ ಜೊತೆಗೆ ಸಹಾಯಕ ಸಬ್ ಇನ್ಸ್ಪೆಕ್ಟರ್ (ASI) ತುಕಾರಾಂ ಓಂಬ್ಳೆ ಅವರು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. * ಭಾರತೀಯ ಎನ್ಎಸ್ಜಿಯ ಸಿಬ್ಬಂದಿ ಆ ಸಂಧರಭದಲ್ಲಿ '9' ಭಯೋತ್ಪಾದಕರನ್ನು ಕೊಂದಿದ್ದರು, ಹಾಗೂ ಅಜ್ಮಲ್ ಕಸಬ್ ಎಂಬ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿದಿದ್ದರು, ಈ ಅಜ್ಮಲ್ ಕಸಬ್ ಎಂಬ ಉಗ್ರನಿಗೆ 2012 ರ ನವೆಂಬರ್. 21ರಂದು ಗಲ್ಲಿಗೇರಿಸಿದ್ದಾರೆ.