Job Description: * ಪ್ರಸ್ತುತ ಕೇಂದ್ರ ಸರ್ಕಾರವು 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ಗುಜರಾತ್ನ ಸೂರತ್ ಮತ್ತು ದಕ್ಷಿಣ ಭಾರತದೊಂದಿಗೆ ಸಂಪರ್ಕ ಕಲ್ಪಿಸುವ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ. * ಈ ರಸ್ತೆಯು ಮಹಾರಾಷ್ಟ್ರದ ನಾಶಿಕ್, ಅಹ್ಮದ್ ನಗರ ಹಾಗೂ ಸೋಲಾಪುರ ಜಿಲ್ಲೆ, ಹಾಗೂ ಲಾತೂರ್ ಜಿಲ್ಲೆಯೂ ಸೇರಿದಂತೆ ಮರಾಠವಾಡ ಪ್ರದೇಶದ ಇತರ ಪ್ರದೇಶಗಳಿಗೆ ಸಂಪರ್ಕವನ್ನು ಕಲ್ಪಿಸಲಿದೆ ಎಂದು ತಿಳಿಸಿದ್ದಾರೆ. * ಸುಮಾರು 1,023 ಕೋಟಿ ರೂ. ವೆಚ್ಚದ 19 ರಸ್ತೆ ನಿರ್ಮಾಣ ಯೋಜನೆಗಳಿಗೆ ಲಾತೂರ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಉದ್ಯಾನವನದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. * ಈ ರಸ್ತೆಯ ನಿರ್ಮಾಣದಿಂದಾಗಿ ಅಲ್ಲಿನ ಸ್ಥಳೀಯರಿಗೆ ಉದೋಗ್ಯ ಲಭಿಸಲಿದೆ ಎಂದಿದ್ದಾರೆ.