Job Description: * ಪ್ರಸ್ತುತ ನೀತಿ ಆಯೋಗವು ರಾಜ್ಯವಾರು ಬಡತನ ಪ್ರಮಾಣವನ್ನು ಸೂಚಿಸುವ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ, ಆ ಸೂಚ್ಯಂಕದಲ್ಲಿ ಕರ್ನಾಟಕ ರಾಜ್ಯವು 19 ನೇ ಸ್ಥಾನವನ್ನು ಪಡೆದುಕೊಂಡಿದೆ. * ನೀತಿ ಆಯೋಗ ಪ್ರಕಟಿಸಿರುವ ಮಾಹಿತಿಯ ಪ್ರಕಾರ ಬಿಹಾರದಲ್ಲಿ ಅತ್ಯಂತ ಹೆಚ್ಚು ಬಡತನವಿರುವ ರಾಜ್ಯವಾಗಿದೆ, ಹಾಗೂ ಕೇರಳ ರಾಜ್ಯವು ಅತ್ಯಂತ ಕಡಿಮೆ ಬಡತನ ಹೊಂದಿರುವ ರಾಜ್ಯವಾಗಿದೆ ಎಂದು ತಿಳಿಸಿದೆ. * ನೀತಿ ಆಯೋಗ ಪ್ರಕಟಿಸಿರುವ ಸೂಚ್ಯಂಕದ ಪ್ರಕಾರ ಅತೀ ಹೆಚ್ಚು ಬಡತನ ಹೊಂದಿರುವ ರಾಜ್ಯಗಳು: - ಬಿಹಾರ ರಾಜ್ಯದಲ್ಲಿ ಶೇ. 51.91 ರಷ್ಟು ಜನಸಂಖ್ಯೆಯು ಬಡವರಾಗಿದ್ದರೆ, - ಜಾರ್ಖಂಡ್ ರಾಜ್ಯದಲ್ಲಿ ಶೇ. 42.16 ರಷ್ಟು ಜನಸಂಖ್ಯೆಯು ಬಡವರಾಗಿದ್ದರೆ, - ಉತ್ತರ ಪ್ರದೇಶ ರಾಜ್ಯದಲ್ಲಿ ಶೇ. 37.79 ರಷ್ಟು ಜನಸಂಖ್ಯೆಯು ಬಡವರಾಗಿದ್ದರೆ, - ಮಧ್ಯಪ್ರದೇಶ ರಾಜ್ಯದಲ್ಲಿ ಶೇ. 36.65 ರಷ್ಟು ಜನಸಂಖ್ಯೆಯು ಬಡವರಾಗಿದ್ದರೆ, - ಮೇಘಾಲಯ ರಾಜ್ಯದಲ್ಲಿ ಶೇ. 32.67 ರಷ್ಟು ಜನಸಂಖ್ಯೆಯು ಬಡವರಾಗಿದ್ದರೆ. * ನೀತಿ ಆಯೋಗ ಪ್ರಕಟಿಸಿರುವ ಸೂಚ್ಯಂಕದ ಪ್ರಕಾರ ಅತೀ ಕಡಿಮೆ ಬಡತನ ಹೊಂದಿರುವ ರಾಜ್ಯಗಳು: - ಕೇರಳ ರಾಜ್ಯವು ಅತ್ಯಂತ ಕಡಿಮೆ ಬಡತನ ಹೊಂದಿರುವ ರಾಜ್ಯವಾಗಿದೆ, ಆ ರಾಜ್ಯದಲ್ಲಿ ಶೇ. 0.71 ರಷ್ಟು ಜನ ಬಡವರಾಗಿದ್ದಾರೆ. - ಗೋವಾ ರಾಜ್ಯದಲ್ಲಿ ಶೇ. 3.76 ರಷ್ಟು ಜನ ಬಡವರಾಗಿದ್ದರೆ, ಈ ರಾಜ್ಯ 2ನೇ ಸ್ಥಾನದಲ್ಲಿದೆ. - ಸಿಕ್ಕಿಂ ರಾಜ್ಯದಲ್ಲಿ ಶೇ. 3.82 ರಷ್ಟು ಜನ ಬಡವರಾಗಿದ್ದರೆ. - ತಮಿಳುನಾಡು ರಾಜ್ಯದಲ್ಲಿ ಶೇ. 4.89 ರಷ್ಟು ಜನ ಬಡವರಾಗಿದ್ದರೆ. - ಪಂಜಾಬ್ ರಾಜ್ಯದಲ್ಲಿ ಶೇ. 5.59 ರಷ್ಟು ಜನ ಬಡವರಾಗಿದ್ದರೆ. * ಅತೀ ಹೆಚ್ಚು ಬಡತನ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳು: - ದಾದ್ರಾ ಮತ್ತು ನಗರ ಹವೇಲಿ (ಶೇ. 27.36), ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ (12.58), ದಮನ್ ಮತ್ತು ದಿಯು (ಶೇ. 6.82) ಮತ್ತು ಚಂಡೀಗಢ (ಶೇ. 5.97) ಅತೀ ಹೆಚ್ಚು ಬಡತನ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಾಗಿವೆ. * ಅತೀ ಕಡಿಮೆ ಬಡತನ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳು: - ಪುದುಚೇರಿ ತನ್ನ ಜನಸಂಖ್ಯೆಯ ಶೇಕಡಾ 1.72 ರಷ್ಟು, ಲಕ್ಷದ್ವೀಪ ಶೇ. 1.82 ರಷ್ಟು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಶೇ. 4.30 ರಷ್ಟು, ಹಾಗೂ ರಾಜ್ಯಧಾನಿ ದೆಹಲಿಯಲ್ಲಿ ಶೇ. 4.79ರಷ್ಟು ಜನ ಸಂಖ್ಯೆ ಬಡತನ ಹೊಂದಿದ್ದಾರೆ.