Job Description: * ಇವತ್ತಿನಿಂದ ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ 12 ನೇ ಆವೃತ್ತಿಯ ಜೂನಿಯರ್ (21 ವಯೋಮಿತಿ) ಪುರುಷರ ಹಾಕಿ ವಿಶ್ವಕಪ್ ನಲ್ಲಿ ಭಾರತೀಯ ತಂಡವು ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಕಣಕ್ಕಿಳಿಯಲಿದ್ದಾರೆ. * ವಿವೇಕ ಸಾಗರ ಪ್ರಸಾದ್ ಸಾರಥ್ಯದ ತಂಡ ಫ್ರಾನ್ಸ್ ವಿರುದ್ಧ ಮೊದಲ ಪಂದ್ಯ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದು, 2016 ರಲ್ಲಿ ಮಾಡಿದ ಸಾಧನೆಯನ್ನು ಪುನರಾವರ್ತಿಸುವ ಹಂಬಲದಲ್ಲಿದೆ. * ಕಿರಿಯರ ತಂಡದ ಮುಖ್ಯ ಕೋಚ್ ಆಗಿ ಕನ್ನಡಿಗ ಬಿ ಜೆ ಕಾರ್ಯಪ್ಪ ಅವರು ಇದ್ದಾರೆ. * 2001 ರಲ್ಲಿ ಭಾರತವು ಮೊದಲ ಬಾರಿ ಜೂನಿಯರ್ ವಿಶ್ವ ಕಪ್ ಗೆದ್ದಿತ್ತು. * ಲಖನೌದಲ್ಲಿ ನಡೆದ ಟೂರ್ನಿಯಲ್ಲಿ ಭಾರತವು 2 ನೇ ಬಾರಿ ಗೆದ್ದಿತ್ತು (5 ವರ್ಷಗಳ ಹಿಂದೆ). * ಹಿಂದಿನ ಎಲ್ಲ ಆವೃತ್ತಿಗಳನ್ನು ಗಮನಿಸಿದಾಗ ಜರ್ಮನಿ ಗರಿಷ್ಟ 6 ಬಾರಿ ಪ್ರಶಸ್ತಿ ಜಯಿಸಿದ್ದರೆ, ಭಾರತ 2 ಬಾರಿ ಪ್ರಶಸ್ತಿ ಪಡೆದು ಚಾಂಪಿಯನ್ ಆಗಿದೆ. ಆಸ್ಟ್ರೇಲಿಯಾ, ಪಾಕಿಸ್ತಾನ, ಅರ್ಜೆಂಟಿನಾ ತಲಾ 1 ಬಾರಿ ಚಾಂಪಿಯನ್ ಆಗಿವೆ.