Job Description: * ಕಳೆದ ವರ್ಷದ ಜೂನ್ ತಿಂಗಳು ಗಾಲ್ವನ್ ಗಡಿಯಲ್ಲಿ ಚೀನಿ ಸೇನೆಯೊಂದಿಗೆ ನಡೆದ ಭಾರಿ ಸಂಘರ್ಷದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಕರ್ನಲ್ ಬಿಕುಮುಲ್ಲಾ ಸಂತೋಷ ಬಾಬು ಕುಟುಂಬಕ್ಕೆ ಮರಣೋತ್ತರವಾಗಿ ಮಹಾವೀರ ಚಕ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. * ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಸೇನಾಪಡೆಗಳ ಎರಡನೇ ಪರಮೋಚ್ಚ ಪುರಸ್ಕಾರ - ಮಹಾವೀರ ಚಕ್ರ ಪ್ರದಾನ ಮಾಡಿ ವೀರಯೋಧನ ತ್ಯಾಗ ಬಲಿದಾನಕ್ಕೆ ಸೂಕ್ತ ಗೌರವ ಸಲ್ಲಿಸಿದರು. * ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಪಡೆಗಳ ಅಗ್ರ ಸೇನಾಧಿಕಾರಿಗಳು ಪಾಲ್ಗೊಂಡ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ಸಂತೋಷ ಬಾಬು ಪತ್ನಿ ಬಿ. ಸಂತೋಷಿ ಮತ್ತು ತಾಯಿ ಮಂಜುಳಾ ಮಹಾವೀರ ಚಕ್ರ ಪುರಸ್ಕಾರವನ್ನು ಸ್ವೀಕರಿಸಿದರು.