Job Description: * ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಿದ ನಂತರ ಅತ್ಯುತ್ತಮ ಪ್ರಾದೇಶಿಕ ಸಂಪರ್ಕದ ವಿಮಾನ ನಿಲ್ದಾಣವಾಗಿ ' ಉಡಾನ್ ಆರ್ ಸಿ ಎಸ್ ' ಪ್ರಶಸ್ತಿ ಗೆ ಭಾಗಿಯಾಗಿದೆ. * ಅತಿ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ದ ಕಾರಣಕ್ಕಾಗಿ ಈ ಪ್ರಶಸ್ತಿಯು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ದೊರಕಿದೆ. * ಭಾರತ ದೇಶದಲ್ಲಿರುವ ಪ್ರಾದೇಶಿಕ ಸಂಪರ್ಕ (ರೀಜನಲ್ ಕನೆಕ್ಟಿವಿಟಿ ಸ್ಕೀಮ್ ) ಜಾಲವನ್ನು ಹೊಂದಿ, ಪ್ರಯಾಣಿಕರಿಗೆ ಬೇರೆ ಸ್ಥಳಗಳೊಂದಿಗೆ ಸಂಪರ್ಕ ಸಾಧಿಸಲು ಉತ್ತಮ ಸೇವೆ ಒದಗಿಸುವ ನಿಲ್ದಾಣಗಳಿಗೆ ನಾಗರಿಕ ವಿಮಾನಯಾನ ಸಚಿವಾಲಯವು 'ಉಡಾನ್ ಆರ್ ಸಿ ಎಸ್ ' ಪ್ರಶಸ್ತಿಯನ್ನು ನೀಡುತ್ತದೆ. * ಹುಬ್ಬಳ್ಳಿ ವಿಮಾನ ನಿಲ್ದಾಣವು ಈ ಬಾರಿ 'ಉಡಾನ್ ಆರ್ ಸಿ ಎಸ್ ' ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಹಿರಿಮೆಯನ್ನು ಸಾಧಿಸಿದೆ ಇದರಿಂದ ಅಂತಾರಾಷ್ಟ್ರೀಯ ದರ್ಜೆಗೆ ಬಡ್ತಿ ಹೊಂದಲು ಉತ್ತೇಜನ ದೊರಕಿದಂತಾಗಿದೆ. * ನಾಗರಿಕ ವಿಮಾನಯಾನ ಖಾತೆಯ ಸಚಿವ ಜ್ಯೋತಿರಾಧಿತ್ಯ ಅವರು ಒಡಿಶಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.