Job Description: * ಪ್ರವಾಸಿಗರು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ಮಹತ್ವವುಳ್ಳ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಉದ್ದೇಶದ ಸಲುವಾಗಿ ರೈಲ್ವೆ ಇಲಾಖೆ 'ಭಾರತ ಗೌರವ್ ರೈಲು' ಸೇವೆಗಳನ್ನು ಘೋಷಿಸಿದೆ. * ಕೇಂದ್ರೀಯ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು 'ಭಾರತ ಗೌರವ್ ರೈಲು' ಸೇವೆ ಕುರಿತು ಮಾಹಿತಿ ನೀಡಿದ್ದಾರೆ. * ಈ ಪ್ರವಾಸ ಸೇವೆಯನ್ನು ಒದಗಿಸುವ ಸಂಸ್ಥೆಗಳು ಪ್ರವಾಸಿ ತಾಣಗಳ ಸಂಸ್ಕೃತಿ, ಪರಂಪರೆಗೆ ಪೂರಕವಾಗಿ ರೈಲಿಗೆ ಹೆಸರನ್ನಿಡಬಹುದು. ಉದಾಹರಣೆಗೆ ಸಿಖ್ ಪರಂಪರೆ ಬಿಂಬಿಸುವ ಪ್ರವಾಸವಾಗಿದ್ದರೆ ಗುರುಕೃಪಾ ರೈಲು, ಶ್ರೀ ಭಗವಾನ್ ಶ್ರೀ ರಾಮನ ಮಂದಿರಗಳಿಗೆ ಭೇಟಿ ನೀಡುವ ಪ್ರವಾಸಕ್ಕೆ ರಾಮಾಯಣ ರೈಲು ಇತ್ಯಾದಿ ಎಂದು ರೈಲ್ವೆ ಸಚಿವರು 'ಭಾರತ ಗೌರವ್ ರೈಲು' ವಿವರಣೆ ನೀಡಿದ್ದಾರೆ.