Job Description: * ಮಹುವಾದಿಂದ ತಯಾರಿಸುವ ಮದ್ಯವನ್ನು ಪಾರಂಪರಿಕ ಮದ್ಯದ ಪಟ್ಟಕ್ಕೆ ಒಯ್ಯಲು ಕಾನೂನು ಬದ್ಧಗೊಳಿಸುವದಕ್ಕಾಗಿ ಹೊಸ ಅಬಕಾರಿ ನೀತಿಯನ್ನು ಮಧ್ಯಪ್ರದೇಶ ಸರ್ಕಾರ ಶೀಘ್ರದಲ್ಲೇ ತರಲಿದೆ. * ಮಹುವಾ (ಇಪ್ಪೆ ಮರ) ಮದ್ಯವನ್ನು 'ಪಾರಂಪರಿಕ ಮದ್ಯ' ವಾಗಿ ಮಾರಾಟ ಮಾಡಲಾಗುವದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. * ಮಹುವಾ (ಇಪ್ಪೆ ಮರ) ಮದ್ಯವನ್ನು ತಯಾರಿಸುವ ಮತ್ತು ಸೇವಿಸುವ ಬುಡಕಟ್ಟು ಜನರಿಗೆ ಉದ್ಯೋಗ ಮತ್ತು ಆದಾಯ ದೊರಕಿಸಿಕೊಡಲು ಇದನ್ನು 'ಹೆರಿಟೇಜ ಲಿಕ್ಕರ್' ಎಂದು ಮದ್ಯದಂಗಡಿಗಳಲ್ಲಿ ಮಾರಾಟ ಮಾಡಲಾಗುವದು.ಇದನ್ನು ಮಾರುವ ಹಕ್ಕನ್ನು ಕೂಡಾ ಬುಡಕಟ್ಟು ಜನರಿಗೆ ನೀಡಲಾಗುವದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.