Job Description: * ಎಚ್ಐವಿ ಸೋಂಕಿನ ವಿರುದ್ಧ ಹೋರಾಟ ನಡೆಸಿ ಶಾಶ್ವತವಾದ ಗೆಲವು ಕಂಡ ವಿಶ್ವದ ಬೆರಳಿಣಿಕೆ ಜನರ ಪೈಕಿ ಅರ್ಜೆಂಟಿನಾ ಸ್ತ್ರೀ ಯನ್ನು ಸೇರಿಸಬಹುದು ಎಂಬುದು ಸಂಶೋಧಕರ ಅಭಿಮತ. * ಅರ್ಜೆಂಟಿನಾದ ಎಸ್ಪೆರಾಂಜಾ ನಗರದ ನಿವಾಸಿಯಾದ 30 ರ ವಯೋಮಾನದ ಈ ಮಹಿಳೆಗೆ 2013 ರಲ್ಲಿ ಎಚ್ಐವಿ ಸೋಂಕು ಇರುವದು ಪತ್ತೆಯಾಗಿತ್ತು. 2017 ರಲ್ಲಿ ಇವರ ಪತಿ ಎಚ್ಐವಿ ಸೋಂಕಿನಿಂದ ನರಳಿ ಪ್ರಾಣ ಕಳೆದುಕೊಂಡಿದ್ದರು. * ರೋಗ ಪತ್ತೆಯಾದ ಬಳಿಕ ಈ ಮಹಿಳೆಯು ಚಿಕೆತ್ಸೆಗೆಗೊಳಗಾಗಿದ್ದಾಳೆ ಆದಾಗ್ಯೂ ಆಕೆ ಚಿಕೆತ್ಸೆ ನೀಡಿದ ಔಷದಗಳನ್ನು ನಿರ್ಲಕ್ಷಿಸಿದ ನಂತರ ಪರೀಕ್ಷೆಗೆ ಒಳಪಡಿಸಿದಾಗ ಸೋಂಕಿನ ಗುಣ ಲಕ್ಷಣಗಳು ಪತ್ತೆಯಾಗಿಲ್ಲ.ಮರುಕಳಿಸುವ ಲಕ್ಷಣವು ಗೋಚರಿಸಿಲ್ಲ.ಆದ್ದರಿಂದ ಈ ಮಹಿಳೆಯು ಎಚ್ಐವಿ ' ಎಲೈಟ್ ಕಂಟ್ರೋಲರ್ ' ನ ವೈದ್ಯಕೀಯ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ಆನ್ನಲ್ಸ್ ಆಫ್ ಇಂಟರ್ನಲ್ ' ಮೆಡಿಸಿನನಲ್ಲಿ ಪ್ರಕಟಣೆಗೆ ಸಿದ್ಧವಾಗಿರುವ ಅಧ್ಯಯನ ಹೇಳಿದೆ. * ವಿಶ್ವದಲ್ಲಿ 80 ದಶಲಕ್ಷ ಜನರು ಎಚ್ಐವಿ ಬಾಧಿತರಾಗಿದ್ದು, 36.3 ದಶಲಕ್ಷ ಜನರು ಮೃತಪಟ್ಟಿದ್ದಾರೆ ಹಾಗೂ 37.7 ದಶಲಕ್ಷ ಜನರು ಎಚ್ಐವಿಯೊಂದಿಗೆ ಬದುಕುತ್ತಿದ್ದಾರೆ.