Job Description: * ಪ್ರಸ್ತುತ ಕೇಂದ್ರ ಸಚಿವ ಸಂಪುಟವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ವ್ಯಕ್ತಿಗೆ ಪ್ರತೀ ತಿಂಗಳು 5 ಕೆ.ಜಿ. ಉಚಿತ ಆಹಾರ ಧಾನ್ಯವನ್ನು ನೀಡುತ್ತಿದೆ ಇದೀಗ ಅದನ್ನು 2022 ರ ಮಾರ್ಚ್ ತಿಂಗಳಿನವರೆಗೆ ವಿಸ್ತರಿಸಲಾಗಿದೆ ಎಂದು ಸಚಿವ ಸಂಪುಟ ತಿಳಿಸಿದೆ. * ಈ ಉಚಿತ ಆಹಾರ ಧಾನ್ಯ ವಿಸ್ತರಣೆಯಿಂದಾಗಿ ಒಟ್ಟಾರೆ 2.6 ಲಕ್ಷ ಕೋಟಿ ರೂ. ವೆಚ್ಚ ತಗುಲಲಿದೆ ಎಂದು ತಿಳಿಸಿದ್ದಾರೆ. * ಈ ಉಚಿತ ಆಹಾರ ಧಾನ್ಯ ವಿಸ್ತರಣೆಯು ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅಡಿಯಲ್ಲಿನ 80 ಕೋಟಿಗೂ ಅಧಿಕ ಜನರಿಗೆ ಸಹಾಯವಾಗಲಿದೆ ಎಂದು ತಿಳಿಸಿದೆ, ಈ ನಿರ್ಧಾರವನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ತಗೆದುಕೊಂಡಿದೆ. * ಈ ಉಚಿತ ಆಹಾರ ಧಾನ್ಯ ಯೋಜನೆಯ ಮೊದಲ ಹಂತವು 2020 ರ 'ಏಪ್ರಿಲ್ ನಿಂದ ಜೂನ್', 2ನೇ ಹಂತವು 2020 ರ 'ಜುಲೈ ನಿಂದ ನವೆಂಬರ್', ಮೂರನೇ ಹಂತವು 2021 ರ 'ಮೇ ನಿಂದ ಜೂನ್', ಇದೀಗ 4 ನೇ ಹಂತವು 2021 ರ 'ಜುಲೈ ತಿಂಗಳಿನಿಂದ ನವೆಂಬರ್ವರೆಗೆ ಜಾರಿಯಲ್ಲಿತ್ತು, ಆದರೆ ಇದೀಗ ಈ ಯೋಜನೆಯುನ್ನು ಮತ್ತೇ ಮುಂದಿನ 4 ತಿಂಗಳವರೆಗೆ ವಿಸ್ತರಣೆ ಮಾಡಿದ್ದಾರೆ.