Job Description: * ತಮ್ಮ ಸ್ಪೋಟಕ ಬ್ಯಾಟಿಂಗ್ ಇಂದ ಟೆಸ್ಟ್, ಒಂಡೇ ಮ್ಯಾಚ್ ಹಾಗೂ ಚುಟುಕು ಹಲವು ದಾಖಲೆಗಳನ್ನು ನಿರ್ಮಿಸಿದ ದಕ್ಷಿಣ ಆಫ್ರಿಕಾದ ಅಬ್ರಾಮ್ ಬೆಂಜಮಿನ್ ಡಿ'ವಿಲಿಯರ್ಸ್ ಈಗ ಐಪಿಎಲ್ ಸೇರಿದಂತೆ ಎಲ್ಲ ಬಗೆಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. * 2018 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ರಂಗಕ್ಕೆ ವಿದಾಯ ಹೇಳಿದ್ದ ಎ.ಬಿ.ಡಿ'ವಿಲಿಯರ್ಸ್ ಈಗ ಎಲ್ಲ ಬಗೆಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. * ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಹಲವಾರು ವರ್ಷಗಳಿಂದ 'Royal Challengers ' ಬೆಂಗಳೂರು ತಂಡದ ಪರ ಆಡುತ್ತಿದ್ದರು ಹಾಗೂ ಆ ತಂಡದ ಪ್ರಮುಖ ಬ್ಯಾಟ್ಸಮನ್ ಎನಿಸಿದ್ದರು. * 'Royal Challengers ' ಬೆಂಗಳೂರು, ಐಪಿಎಲ್ ನ 2022 ರ ಆವೃತ್ತಿಯಲ್ಲಿ ಅನುಭವಿ ಆಟಗಾರರನ ಸೇವೆ ಕಳೆದುಕೊಳ್ಳಲಿದೆ. * 'ದಕ್ಷಿಣ ಆಫ್ರಿಕಾ ಹಾಗೂ ಭಾರತದಲ್ಲಿ ಆಡುವಾಗ ದೊರೆತ ಭಾರೀ ಬೆಂಬಲದಿಂದ ನನ್ನ ಹೃದಯ ತುಂಬಿ ಬಂದಿದೆ. ಆ ಕ್ಷಣವನ್ನು ನಾನು ನನ್ನ ಜೀವಮಾನದಲ್ಲಿಯೇ ಮರೆಯಲಾರೆ' ಎಂದು ಎ.ಬಿ.ಡಿ'ವಿಲಿಯರ್ಸ್ ಅಭಿಮಾನದ ಮಾತುಗಳನ್ನು ನುಡಿದರು. * ಎ.ಬಿ.ಡಿ'ವಿಲಿಯರ್ಸ್ 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ 20,000 ರನ್, 47 ಶತಕಗಳು,109 ಅರ್ಧಶತಕಗಳನ್ನು ಪೂರೈಸಿದ್ದಾರೆ.