Job Description: * ನವೆಂಬರ್ 20 ರಿಂದ ಗೋವಾ ರಾಜಧಾನಿ ಪಣಜಿಯಲ್ಲಿ ನಡೆಯುತ್ತಿರುವ 52 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವನ್ನು ಖ್ಯಾತ ನಟಿ ಹೇಮಾಮಾಲಿನಿ ಉದ್ಘಾಟಿಸಲಿದ್ದಾರೆ. * ಗೀತೆ ರಚನೆಕಾರ ಪ್ರಸೂನ್ ಜೋಶಿ ಅವರಿಗೆ ಇಂಡಿಯನ್ ಫಿಲಂ ಪರ್ಸನಾಲಿಟಿ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು . * ಪ್ರಸ್ತುತ ಚಲನಚಿತ್ರೋತ್ಸವ ಆಯೋಜನೆಗೆ 18 ಕೋಟಿ ರೂ. ಮಾಡಲಾಗುತ್ತಿದೆ ಎಂದು ಸಂಚಾಲಕ ಚೈತನ್ಯ ಪ್ರಸಾದ ಮಾಹಿತಿ ನೀಡಿದ್ದಾರೆ. * ವಿಶ್ವದ 63 ದೇಶಗಳ 148 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವದು ಮತ್ತು ಪ್ರಸಕ್ತ ವರ್ಷ ಬ್ರಿಕ್ಸ್ ಚಿತ್ರಪಟ ಮಹೋತ್ಸವ ಆಯೋಜಿಸಲಾಗಿದ್ದು ಈ ಮಹೋತ್ಸವದಲ್ಲಿ 12 ಪ್ರಿಮಿಯೇರ್, 26 ಏಷ್ಯಾ, 64 ಇಂಡಿಯನ್ ಪ್ರಿಮಿಯೇರ್ ಚಲನಚಿತ್ರ ಪ್ರದರ್ಶಿಸಲಾಗುವದು. * ಇತ್ತೀಚಿಗೆ ನಿಧನರಾದ ಕನ್ನಡದ ನಟ ಪುನೀತ್ ರಾಜಕುಮಾರ ಅವರಿಗೂ, ನಟರಾದ ಸುಪ್ರೀತ್ ಭಾವೆ, ದೀಲಿಪಕುಮಾರ ಅವರಿಗೂ ಮಹೋತ್ಸವದಲ್ಲಿ ಶೃದ್ಧಾಂಜಲಿ ಸಲ್ಲಿಸಲಾಗುವದು ಎಂದು ಸಂಚಾಲಕರು ಮಾಹಿತಿ ನೀಡಿದ್ದಾರೆ.