Job Description: * ವಿವಾದಿತ ಮೂರೂ ಕೃಷಿ ಕಾಯ್ದೆಗಳನ್ನು ಕೊನೆಗೂ ಹಿಂದಕ್ಕೆ ಪಡೆಯುವದಾಗಿ ಪ್ರಧಾನಿ ಮೋದಿಯವರು ಘೋಷಿಸಿದ್ದಾರೆ. * ಈ ದಿಢೀರ ಅಚ್ಚರಿ ನಿರ್ಧಾರದಿಂದ ರೈತರ ಅವಿರತ ಹೋರಾಟಕ್ಕೆ ಕೊನೆಗೂ ಜಯದ ಹಾರ ಒಲಿದಂತಾಗಿದೆ. * ದೇಶದ ರೈತರ ಶಕ್ತಿ ಮುಂದೆ ಕೇಂದ್ರ ಸರ್ಕಾರ ಮಂಡಿಯೂರಿ ಕುಳಿತಂತಾಗಿದೆ. * ದೇಶವನ್ನು ಉದ್ದೇಶಿಸಿ ಶುಕ್ರವಾರದ ಬೆಳಗ್ಗೆ ಮಾತನಾಡಿದ ಪ್ರಧಾನಿಗಳು, ಮೂರೂ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುತ್ತೇವೆ. ಹಾಗೂ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿಯೇ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ಸಾಂವಿಧಾನಿಕ ಪ್ರಕ್ರಿಯೆ ನಡೆಯಲಿದೆ ಎಂದರು. * ಕೇಂದ್ರ ಹೊರಡಿಸಿದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಕಳೆದೊಂದು ವರ್ಷದಿಂದ ಪಂಜಾಬ, ರಾಜಸ್ತಾನ, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಕೆಲ ಭಾಗಗಳ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಲೇ ಇದ್ದರು. * ಕೇಂದ್ರದ 11 ಸುತ್ತಿನ ಔಪಚಾರಿಕ ಮಾತುಕತೆ ನಡೆಸಿದರು ರೈತರ ಮನವೊಲಿಕೆಯು ಸಾಧ್ಯವಾಗದ ಕಾರಣ ಕೇಂದ್ರವು ರೈತರ ಪ್ರತಿಭಟನೆಗೆ ಮಣಿದು ಕಾಯ್ದೆಗಳನ್ನು ವಾಪಸ ಪಡೆಯಲು ನಿರ್ಧರಿಸಿದೆ.