Job Description: * ಅತ್ಯಾಚಾರವೆಸಗುವ ಅಪರಾಧಿಗಳ ಕಾಮಾಸಕ್ತಿಯನ್ನು ಕುಗ್ಗಿಸಲು ಮುಂದಾಗಿರುವ ಪಾಕಿಸ್ತಾನದ ಪಾರ್ಲಿಮೆಂಟ್ನಲ್ಲಿ ಕಾಮಾಶಕ್ತಿ ಕುಗ್ಗಿಸಲು ರಾಸಾಯನಿಕ ಬಳಕೆ ಮಾಡುವ ಮಸೂದೆ ಈಗ ಅಂಗೀಕಾರವಾಗಿದೆ. * ಮಹಿಳೆಯರು ಮತ್ತು ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಕಾರಣಕ್ಕಾಗಿ ಈ ನಿರ್ಧಾರಕ್ಕೆ ಬರಲಾಗಿದೆ. * ಅತ್ಯಾಚಾರವೆಸಗುವ ಅಪರಾಧಿಯ ಮೇಲೆ ರಾಸಾಯನಿಕ ಬಳಕೆ ಮಾಡುವುದರಿಂದ ಆತನ ಜೀವಿತಾವಧಿಯಲ್ಲಿ ಮತ್ತೆ ಸಂಭೋಗ ನಡೆಸಲು ಅಸಮರ್ಥನಾಗಿರುತ್ತಾನೆ. ಆದರೆ ನ್ಯಾಯಾಲಯ ಇದಕ್ಕೆ ಅನುಮತಿ ನೀಡುವುದು ಕಡ್ಡಾಯವಾಗಿದೆ.