Job Description: * ಪ್ರಸ್ತುತ ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವರಾದ ಜನರಲ್ ವಿ. ಕೆ. ಸಿಂಗ್ ಅವರು ಇತ್ತೀಚಿಗೆ ಗುವಾಹಟಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಡ್ರೋನ್/ಯುಎವಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಸಂಶೋಧನೆಯಲ್ಲಿ ಭಾರತದ ಮೊದಲ ಕೇಂದ್ರವನ್ನು ಉದ್ಘಾಟಣೆ ಮಾಡಿದ್ದಾರೆ. * ಈ ಡ್ರೋನ್/ಯುಎವಿ ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಈಶಾನ್ಯ ಪ್ರದೇಶಕ್ಕಾಗಿ ನಿಯೋಜಿಸಲಾಗಿದೆ, ಒಟ್ಟಾರೆ ಆಡಳಿತಾತ್ಮಕ ಡ್ರೋನ್ ಡೇಟಾ ನಿರ್ವಹಣೆಗಾಗಿ ನೋಡಲ್ ಕೇಂದ್ರ ಹಾಗೂ ದೂರದ ಪ್ರದೇಶಗಳಿಗೆ ತುರ್ತು ವೈದ್ಯಕೀಯ ವ್ಯವಸ್ಥೆಯನ್ನು ತಲುಪಿಸುವ ಕಾರ್ಗೋ ಡ್ರೋನ್ಗಳನ್ನು ಬೆಂಬಲಿಸಲು ಈ ಡ್ರೋನ್/ಯುಎವಿ ಬಳಸಲಾಗುತ್ತದೆ. * ವಿ. ಕೆ. ಸಿಂಗ್ ಅವರು 'AXOM ಡ್ರೋನ್ಪೋರ್ಟ್ಸ್'ನ್ನು ಉದ್ಘಾಟಿಸಿದರು. ಈಶಾನ್ಯ ಪ್ರದೇಶದಲ್ಲಿ ಡ್ರೋನ್ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಅಳವಡಿಕೆಯನ್ನು ಉತ್ತೇಜಿಸಲು ಇದನ್ನು ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಡ್ರೋನ್/ಯುಎವಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಸಂಶೋಧನೆಯ ಕೇಂದ್ರವನ್ನು ಐಐಟಿ, ಗುವಾಹಟಿ ಹಾಗೂ ಎಫ್ಐಸಿಸಿಐ ಎಂಬ ಉದ್ಯಮ ಸಂಸ್ಥೆ ಜಂಟಿಯಾಗಿ ಇದನ್ನು ಆಯೋಜಿಸಿದೆ. * ಈ ಹಿಂದೆ ಪ್ರಧಾನಿ ಮೋದಿ ಆಡಳಿತದ ಕೇಂದ್ರ ಸರ್ಕಾರವು ಆಗಸ್ಟ್ನಲ್ಲಿ ಹೊಸ ಡ್ರೋನ್ ನಿಯಮಗಳನ್ನು ಜಾರಿಗೆ ತಂದಿದೆ, ಅದುವೇ ಉತ್ಪಾದಕರಿಗೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ (PLI) ಎಂದು ಘೋಷಣೆ ಮಾಡಿದ್ದಾರೆ.