Job Description: * ಪ್ರಸ್ತುತ ಕೇಂದ್ರ ರಕ್ಷಣಾ ಸಚಿವಾಲಯವು ವೈಸ್ ಅಡ್ಮಿರಲ್ ಆರ್ ಹರಿಕುಮಾರ್'ಅವರನ್ನು ಮುಂದಿನ ನೌಕಾಪಡೆ ಮುಖ್ಯಸ್ಥರಾಗಿ ನೇಮಕ ಮಾಡುವದಾಗಿ ಆದೇಶ ಹೊರಡಿಸಿದೆ. * ವೈಸ್ ಅಡ್ಮಿರಲ್ ಆರ್ ಹರಿಕುಮಾರ್ ಅವರು ಪಶ್ಚಿಮ ನೌಕಾ ಕಮಾಂಡ್ನ ಫ್ಲಾಗ್ ಆಫೀಸರ್ ಆಗಿದ್ದರು, ಇದೀಗ ಇವರು ಮುಂದಿನ ನೌಕಾಪಡೆ ಮುಖ್ಯಸ್ಥರಾಗಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ, ಅಷ್ಟೇ ಅಲ್ಲದೇ ನವೆಂಬರ್. 30 ರಂದು ಅಡ್ಮಿರಲ್ ಕರಂಬಿರ್ ಸಿಂಗ್ ಅವರು ನಿವೃತ್ತಿಯಾದ ನಂತರ ಅವರ ಈ ಸ್ಥಾನವನ್ನು ವೈಸ್ ಅಡ್ಮಿರಲ್ ಹರಿ ಕುಮಾರ್ ಅವರು ವಹಿಸಿಕೊಳ್ಳಲಿದ್ದಾರೆ . * ವೈಸ್ ಅಡ್ಮಿರಲ್ ಹರಿ ಕುಮಾರ್ ಅವರು ಈ ಮೊದಲು ಹೆಡ್ಕ್ವಾರ್ಟರ್ಸ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್'ನ ಇಂಟಿಗ್ರೇಟೆಡ್ ಸ್ಟಾಫ್ ಕಮಿಟಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. * ಪಶ್ಚಿಮ ನೌಕಾ ಕಮಾಂಡ್ನ ಫ್ಲಾಗ್ ಆಫೀಸರ್ ಆಗಿದ್ದ ಹರಿ ಕುಮಾರ್ ಅವರು 1983-ಬ್ಯಾಚ್ ಅಧಿಕಾರಿಯಾಗಿದ್ದಾರೆ, ಹಾಗೂ ಇವರಿಗೆ PVSM, AVSM ಮತ್ತು VSM ಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ, ಅಷ್ಟೇ ಅಲ್ಲದೇ ಇವರು ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆ INS ವಿರಾಟ್ ಗೆ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.