Job Description: * ಮೆರಿಲ್ಬೋನ್ ಕ್ರಿಕೆಟ್ ಕ್ಲಬ್ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪಿಂಕ್ಬಾಲ್ ಟೆಸ್ಟ್ ಪ್ರತಿಪಾದಕ ಕೀತ್ ಬ್ರಾಡ್ಶಾ ಅವರು ತಮ್ಮ 58 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ವರದಿ ಮಾಡಿದೆ. * ಈ ಹಿಂದೆ ಇವರು 1980 ರಲ್ಲಿ ಆಸ್ಟ್ರೇಲಿಯಾದ ಟಾಸ್ಮೇನಿಯಾ ತಂಡದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಭಾಗಿಯಾಗಿದ್ದರು, ತದನಂತರ ಅಲ್ಲಿಂದ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದರು, ಅಷ್ಟೇ ಅಲ್ಲದೇ ಎಂಸಿಸಿಗೆ ಪ್ರಥಮ ಬ್ರಿಟಿಷೇತರ ಸಿಇಒ ಆಗಿ 2006 ರಲ್ಲಿ ನೇಮಕಗೊಂಡರು. * ಬ್ರಾಡ್ಶಾ ಅವರು ಮತ್ತೇ 2011 ರಲ್ಲಿ ಆಸ್ಟ್ರೇಲಿಯಾಕ್ಕೆ ವಾಪಸಾದರು ಅಲ್ಲಿಂದ ಅವರು ಸೌತ್ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಗೆ CEOಆಗಿ ನೇಮಕಗೊಂಡರು. * ಬ್ರಾಡ್ಶಾ ಅವರು ಹೊನಲು ಬೆಳಕಿನ ಟೆಸ್ಟ್ ಕ್ರಿಕೆಟ್'ನ್ನು ಆರಂಭಿಸಿದರು, 2015 ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ಮಧ್ಯೆ ಅಡಿಲೇಡ್ನಲ್ಲಿ ಪಿಂಕ್ ಬಾಲ್ ಟೆಸ್ಟ್'ನ್ನು ನಡೆಸಿದರು.