Job Description: * ಪ್ರಸ್ತುತ ಪಾಕಿಸ್ತಾನಕ್ಕೆ ಆಗಮಿಸುವ ಮತ್ತು ಅಲ್ಲಿದಂಲೇ ನಿರ್ಗಮಿಸುವ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳಿಗೆ ಇದೇ ನವೆಂಬರ್ 10 ರಿಂದ ಪೂರ್ಣ ಪ್ರಮಾಣದ ಪ್ರಯಾಣಿಕ ಸಾಮರ್ಥ್ಯ ಜೊತೆ ಕಾರ್ಯನಿರ್ವಹಿಸಲು ಪಾಕಿಸ್ತಾನ ರಾಷ್ಟ್ರವು ಅನುಮತಿ ನೀಡುತ್ತಿದೆ ಎಂದು ತಿಳಿಸಿದೆ. * ಅಷ್ಟೇ ಅಲ್ಲದೇ ಈ ವಿಷಯದ ಬಗೆಗಿನ ಮಾಹಿತಿಯನ್ನು ಪಾಕಿಸ್ತಾನದ ವಾಯುಯಾನ ಪ್ರಾಧಿಕಾರವು ತನ್ನ ಎಲ್ಲಾ ವೈಮಾನಿಕ ಸಿಬ್ಬಂದಿಗೆ ನೋಟಿಸ್ ನ್ನು ರವಾನಿಸಿದೆ. * ಇತ್ತೀಚಿಗೆ ಪಾಕಿಸ್ತಾನ ರಾಷ್ಟ್ರವು 'ಗೋ ಫರ್ಸ್ಟ್' ವಿಮಾನಯಾನ ಸಂಸ್ಥೆಯ ಶ್ರೀನಗರ-ಶಾರ್ಜಾ ನಡುವಿನ ವಿಮಾನ ಹಾರಾಟದ ವಾಯುಪ್ರದೇಶವನ್ನು ಬಳಸಲು ಅನುಮತಿ ನಿರಾಕರಿಸಿತ್ತು. * ಇದಾದ ಬಳಿಕ ಇತ್ತೀಚಿಗಷ್ಟೇ ಭಾರತದ ಶ್ರೀನಗರ-ಶಾರ್ಜಾ ವಿಮಾನ ಹಾರಾಟವು ಪಾಕಿಸ್ತಾನದ ವಾಯುಪ್ರದೇಶ ಬಳಸಲು ಅನುಮತಿಯನ್ನು ಕೋರಿತ್ತು, ಅಷ್ಟೇ ಅಲ್ಲದೇ ಭಾರತವು ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನ ರಾಷ್ಟ್ರಕ್ಕೆ ಮನವಿಯನ್ನು ಮಾಡಿ ಕೊಂಡಿತ್ತು. * ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಮಾಂಡ್ ಮತ್ತು ಕಾರ್ಯನಿರ್ವಹಣಾ ಕೇಂದ್ರವು ಈ ನಿರ್ಧಾರವನ್ನು ತಗೆದುಕೊಂಡಿದೆ ಎಂದು ತಿಳಿಸಿದೆ.