Job Description: * ಭಾರತವು ಇತ್ತೀಚಿಗೆ ಅಫ್ಘಾನಿಸ್ತಾನ ಕುರಿತು ಚರ್ಚೆ ನಡೆಸಲು ಸಭೆಯನ್ನು ಆಯೋಜಿಸಿದ್ದು, ಈ ಸಭೆಯಿಂದ ಪಾಕಿಸ್ತಾನ ಮತ್ತು ಚೀನಾ ದೇಶಗಳು ಹಿಂದೆ ಸರಿದಿವೆ. * ಭಾರತವು ಆಯೋಜಿಸಿರುವ ಈ ಸಭೆಗೆ ನೆರೆಯ ರಾಷ್ಟ್ರಗಳಾದ ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್ ಹಾಗೂ ಉಜ್ಬೇಕಿಸ್ತಾನ್ ಉನ್ನತ ಭದ್ರತಾ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ, ಅಷ್ಟೇ ಅಲ್ಲದೇ ಈ ಸಭೆಯು ಅಜಿತ್ ದೋವಲ್ ಅವರ ಸಮ್ಮುಖದಲ್ಲಿ ಜರುಗಲಿದೆ.. * ಈ ಸಭೆಗೆ ರಷ್ಯಾ ಹಾಗೂ ಇರಾನ್ ದೇಶದ ಪ್ರತಿನಿಧಿಗಳು ಕೂಡ ನಾಳೆ ಪಾಲ್ಗೊಳ್ಳಲಿದ್ದಾರೆ, ಪ್ರಸ್ತುತ ಭಯೋತ್ಪಾದನೆ, ಮಾದಕವಸ್ತುಗಳ ಕಳ್ಳಸಾಗಣೆ ಬೆದರಿಕೆಗಳನ್ನು ಒಟ್ಟಾಗಿ ಎದುರಿಸುವ ಹಿನ್ನಲೆಯಿಂದಾಗಿ ಈ ಸಭೆಯನ್ನು ಆಯೋಜಿಸಲಾಗಿದೆ. * ಈ ಹಿಂದೆ ಪ್ರಾದೇಶಿಕ ಭದ್ರತೆಗೆ ಸಂಬಂಧಿಸಿದಂತೆ 2018 ರ ಸೆಪ್ಟೆಂಬರ್ ಹಾಗೂ 2019 ರ ಡಿಸೆಂಬರ್ ನಲ್ಲಿ ಇರಾನ್ ನಲ್ಲಿ ಸಭೆ ಜರುಗಿವೆ. * ಭಾರತ ಆಯೋಜಿಸಿರುವ ಈ ಸಭೆಯು ದೆಹಲಿ ಪ್ರಾದೇಶಿಕ ಸಂವಾದ ಎಂಬ ಹೆಸರಿನಲ್ಲಿ ನಡೆಯತ್ತಿದೆ.