Job Description: * ಪ್ರಸ್ತುತ ದೆಹಲಿ ಸರ್ಕಾರವು ಉಚಿತ ಪಡಿತರ ಯೋಜನೆಯನ್ನು ಇನ್ನೂ ಮುಂದಿನ ಆರು ತಿಂಗಳವರೆಗೆ ಅನಾದರೆ ಮೇ 2022 ರವರೆಗೆ ಮುಂದುವರಿಸಲು ದೆಹಲಿಯ AAP ಸರ್ಕಾರವು ತರ್ಮಾನಿಸಿದೆ, ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಿಳಿಸಿದ್ದಾರೆ. * ಕೋವಿಡ್-19 ನಿಂದಾಗಿ ಅದೆಷ್ಟೋ ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ, ಹಾಗೂ ಜನರು ದಿನಕ್ಕೆ ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ, ಈ ಪರಿಸ್ಥಿತಿಯನ್ನು ಅರಿತ ದೆಹಲಿಯ ಸರ್ಕಾರವು ಉಚಿತ ಪಡಿತರ ಯೋಜನೆಯನ್ನು ಮುಂದಿನ '6' ತಿಂಗಳು ವಿಸ್ತರಿಸಲು ನಿರ್ಧರಿಸಿದೆ. * ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಮೂಲಕ ಉಚಿತ ಪಡಿತರ ವಿತರಣೆಯನ್ನು ನ.30ರ ವರೆಗೆ ಮಾತ್ರ ವಿತರಿಸಲಾಗುತ್ತದೆ ಎಂದು ತಿಳಿಸಿತ್ತು, ಇದೀಗ ಕೇಂದ್ರ ಸರ್ಕಾರವು ಪಡಿತರ ವಿತರಣೆಯ ಯಾವುದೇ ಪ್ರಸ್ತಾವ ತಿಳಿಸಿಲ್ಲ. * ಇದೀಗ ದೆಹಲಿ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ಹಾಗೂ (PMJKY) ಪಿಎಂಜಿಕೆಎವೈ ಅಡಿಯಲ್ಲಿ ಫಲಾನುಭವಿಗಳಿಗೆ ಉಚಿತ ಪಡಿತರವನ್ನು ಮುಂದುವರೆಸಲು ಸಿದ್ಧವಾಗಿದೆ. * ಪ್ರಸ್ತುತ ದೆಹಲಿಯಲ್ಲಿ 2,000 ಕ್ಕೂ ಅಧಿಕ ನ್ಯಾಯಬೆಲೆ ಅಂಗಡಿಗಳಿವೆ, 17.77 ಲಕ್ಷ ಪಡಿತರ ಚೀಟಿದಾರರು ಹಾಗೂ ಸುಮಾರು 72.78 ಲಕ್ಷ ಫಲಾನುಭವಿಗಳಿದ್ದಾರೆ, ಇದೀಗ ಉಚಿತ ಪಡಿತರವನ್ನು ನೀಡಲಾಗುತ್ತಿದೆ ಎಂದು ದೆಹಲಿ ಸರ್ಕಾರ ತಿಳಿಸಿದೆ.