Job Description: * ಪ್ರಸ್ತುತ ಭಾರತೀಯ ರೈಲ್ವೆ ಕೇಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ (IRCTC) ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಇದೀಗ 'ರಾಮಾಯಣ ಯಾತ್ರಾ' ಪ್ರವಾಸ ಸರಣಿಯು ವಿಶೇಷ ರೈಲುನ್ನು ಸಫ್ದರ್ಜಂಗ್ ರೈಲು ನಿಲ್ದಾಣದಿಂದ ಪ್ರಾರಂಭಿಸಿದೆ. * ಇದೀಗ ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ಒಂದು ಹಂತಕ್ಕೆ ನಿಯಂತ್ರಣಕ್ಕೆ ಬರುತ್ತಿದೆ, ಈ ಹಿನ್ನಲೆಯಿಂದ ದೇಶೀ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೈಲುಗಳನ್ನು ಪುನಃ ಆರಂಭಿಸಲಾಗುತ್ತಿದೆ IRCTC ತಿಳಿಸಿದೆ. * ಈ 'ರಾಮಾಯಣ ಯಾತ್ರಾ' ಪ್ರವಾಸವು ಸುಮಾರು 13 ರಿಂದ 17 ದಿನಗಳ ಪ್ರಯಾಣವಾಗಿದೆ, ಈ ಯಾತ್ರಾ ಪ್ರವಾಸದಲ್ಲಿ ಪ್ರವಾಸಿಗರನ್ನು ಅಯೋಧ್ಯೆ ಹಾಗೂ ಇನ್ನು ಅನೇಕ ರಾಮಾಯಣಕ್ಕೆ ಸಂಬಂಧ ಪಟ್ಟಿರುವ ಸ್ಥಳಗಳಿಗೆ ಕರೆದುಕೊಂಡು ಹೋಗಲಾಗುತ್ತದೆ ಎಂದು ತಿಳಿಸಲಾಗಿದೆ. * ದಕ್ಷಿಣ ಹಾಗೂ ಉತ್ತರ ಭಾರತದ ಪ್ರವಾಸಿಗರ ಅವಶ್ಯಕತೆ ಪೂರೈಸಲು, ಈ ವಿಶೇಷ ರೈಲು ಪ್ರವಾಸವು ನವೆಂಬರ್. 16 ರಂದು ಹಾಗೂ ನವೆಂಬರ್. 25 ರಂದು ಪ್ರಾರಂಭವಾಗಲಿದೆ ಎಂದು IRCTC ಪ್ರಕಟಣೆಯಲ್ಲಿ ತಿಳಿಸಿದೆ.