Job Description: * ವೆಸ್ಟ್ ಇಂಡೀಸ್ ಆಲೌರೌಂಡರ್ ಡ್ವೇನ್ ಬ್ರಾವೋ ಅವರು ಟಿ-20 ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ತಿಳಿಸುವದಾಗಿ ಘೋಷಣೆ ಮಾಡಿದ್ದಾರೆ. * ಇತ್ತೀಚಿಗಷ್ಟೇ ವೆಸ್ಟ್ ಇಂಡೀಸ್ ತಂಡವು ಟಿ-20 ವಿಶ್ವಕಪ್'ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸಿ ಟಿ-20 ವಿಶ್ವಕಪ್ ನಿಂದ ಹೊರನಡೆದಿದೆ. * ಇದೇ ಸಂಧರ್ಭದಲ್ಲಿ ವೆಸ್ಟ್ ಇಂಡೀಸ್ ಆಲೌರೌಂಡರ್ ಡ್ವೇನ್ ಬ್ರಾವೋ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ. * ಡ್ವೇನ್ ಬ್ರಾವೋ ಅವರು 2006 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಟಿ-20 ಮೂಲಕ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. * ಡ್ವೇನ್ ಬ್ರಾವೋ ಅವರು ಒಟ್ಟಾರೆ ಇಲ್ಲಿಯತನಕ 90 ಪಂದ್ಯಗಳಲ್ಲಿ ಆಟವಾಡಿದ್ದಾರೆ, ಅವುಗಳಲ್ಲಿ 1,245 ರನ್ ಸಿಡಿಸಿ, 78 ವಿಕೆಟ್'ಗಳನ್ನೂ ಪಡೆದುಕೊಂಡಿದ್ದಾರೆ. * ಈ ಹಿಂದೆ 2018 ರಲ್ಲಿ ಡ್ವೇನ್ ಬ್ರಾವೋ ಅವರು ಕ್ರಿಕೆಟ್ ಗೆ ವಿದಾಯವನ್ನು ತಿಳಿಸಿದ್ದರು, ಮತ್ತೇ 2019 ರಲ್ಲಿ ತಮ್ಮ ವಿದಾಯವನ್ನು ಮರಳಿ ಪಡೆದು ತಂಡಕ್ಕೆ ಸೇರಿಕೊಂಡರು.