Job Description: * ಕೋವಿಡ್-19 ಸೋಂಕಿನ ವಿರುದ್ಧ ಹೊರಡುವ ಮೊಲ್ನುಪಿರವಿರ್ ಮಾತ್ರೆಗೆ ಬ್ರಿಟನ್ ರಾಷ್ಟ್ರವು ಅನುಮೋದನೆಯನ್ನು ನೀಡಿದೆ, ಇದೀಗ ಬ್ರಿಟನ್ ದೇಶವು ಕೋವಿಡ್-19 ಸೋಂಕು ನಿರೋಧಕ ಮಾತ್ರೆಗೆ ಅನುಮೋದನೆ ನೀಡಿದ ವಿಶ್ವದ ಮೊದಲ ರಾಷ್ಟ್ರವಾಗಿ ಹೊರಹೊಮ್ಮಿದೆ. * ಈ ಕೊರೊನಾ ನಿರೋಧಕ ಮಾತ್ರೆಯನ್ನು ಅಮೇರಿಕ ಮೂಲದ ಮರ್ಕ್ ಮತ್ತು ರಿಡ್ಜ್ಬ್ಯಾಕ್ ಬಯೋ ಥೆರಪಿಸ್ಟಿಕ್ಸ್ ಕಂಪನಿಗಳ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. * ಕೊರೊನಾ ಸೋಂಕು ದೃಢಪಟ್ಟಿರುವ ರೋಗಿಗೆ 5ದಿನಗಳ ಒಳಗೆ ದಿನಕ್ಕೆ 2 ಮಾತ್ರೆಗಳ ರೀತಿಯಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಒಟ್ಟಾರೆ 775 ರೋಗಿಗಳ ಮೇಲೆ ಮೆರ್ಕ್ ಮಾತ್ರೆಗಳ ಕ್ಲಿನಿಕಲ್ ಪ್ರಯೋಗವನ್ನು ನಡೆಸಲಾಗಿದೆ, ಇದರಲ್ಲಿ ಮೊದಲ 29 ದಿನಗಳಲ್ಲಿ ಯಾವುದೇ ವ್ಯಕ್ತಿಯು ಕೂಡ ಕೋವಿಡ್-19 ಸೋಂಕಿನಿಂದ ಮೃತಪಟ್ಟಿಲ್ಲ ಎಂದು ತಿಳಿಸಿದ್ದಾರೆ.