Job Description: * ಉತ್ತರಾಖಂಡದ ಕೇದಾರನಾಥದಲ್ಲಿ ಶ್ರೀ ಆದಿಶಂಕರಾಚಾರ್ಯರ ಪ್ರತಿಮೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದರು. * ಇತ್ತೀಚಿಗೆ ಪ್ರಧಾನಮಂತ್ರಿ ಮೋದಿ ಅವರು 2 ದಿನಗಳ ಕಾಲ ಕೇದಾರನಾಥ ಪ್ರವಾಸವನ್ನು ಕೈಗೊಂಡಿದ್ದಾರೆ. * ಶ್ರೀ ಆದಿಶಂಕರಾಚಾರ್ಯರ 12 ಅಡಿ ಪ್ರತಿಮೆಯನ್ನು ಮೈಸೂರಿನ ಖ್ಯಾತ ಶಿಲ್ಪಿ ಯೋಗಿರಾಜ್ ಅವರು ನಿರ್ಮಿಸಿದ್ದಾರೆ, ಈ ಹಿಂದೆ 2013 ರಲ್ಲಿ ಉತ್ತರಾಖಂಡದಲ್ಲಿ ಭಾರೀ ಪ್ರವಾಹ ಉಂಟಾಗಿತ್ತು ಅ ಸಂಧರ್ಭದಲ್ಲಿ ಈ ಪ್ರತಿಮೆಯು ನಾಶವಾಗಿತ್ತು, ಈ ಕಾರಣದಿಂದಾಗಿ ಶ್ರೀ ಗುರು ಶಂಕರಾಚಾರ್ಯರ ಪ್ರತಿಮೆಯನ್ನು ನಿರ್ಮಾಣ ಮಾಡಲು ಸೂಚನೆ ನೀಡಲಾಗಿತ್ತು ಎಂದು ತಿಳಿಸಿದ್ದರು. * ಮೋದಿ ಅವರು ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣದ ಜೊತೆಗೆ ಕೇದಾರನಾಥದಲ್ಲಿ 180 ಕೋಟಿ ರೂ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದರು. * ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇದಾರನಾಥದಿಂದ ಜಮ್ಮು ಮತ್ತು ಕಾಶ್ಮೀರದ ರಜೌರಿಯ ನೌಶೇರಾ ಸೆಕ್ಟರ್ನ ಮುಂಭಾಗದ ಪ್ರದೇಶವನ್ನು ತಲುಪಿ ಅಲ್ಲಿನ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಣೆ ಮಾಡಿದರು.