Job Description: * ಶ್ರೀಲಂಕಾ ಸರ್ಕಾರವು ಸಂಪೂರ್ಣ ಸಾವಯವ ಕೃಷಿ ಸಾಧಿಸುವ ನಿಟ್ಟಿಯಲ್ಲಿ ರಾಸಾಯನಿಕ ಗೊಬ್ಬರದ ಬಳಕೆಯನ್ನು ನಿಷೇಧಿಸುವ ನಿರ್ಧಾರವನ್ನು ಕೈಗೊಂಡಿದೆ, ಇದೀಗ ಅಲ್ಲಿನ ರೈತರು ರಸಗೊಬ್ಬರಕ್ಕಾಗಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. * ಶ್ರೀಲಂಕಾದ ರೈತರ ಪ್ರತಿಭಟನೆ ನಡುವೆ ಇದೀಗ ಭಾರತವು ವಾಯುಪಡೆಯ 2 ವಿಮಾನಗಳ ಮೂಲಕ ಶ್ರೀಲಂಕಾಕ್ಕೆ ನ್ಯಾನೋ ಸಾರಜನಕ ರಸಗೊಬ್ಬರವನ್ನು ರವಾನಿಸಿದೆ. * ಶ್ರೀಲಂಕಾ ಸರ್ಕಾರದ ವಿನಂತಿಯ ಮೇರೆಗೆ ಭಾರತೀಯ 2 ಐಎಎಫ್ ಸಿ-17 ಗ್ಲೋಬ್ಮಾಸ್ಟರ್ ವಿಮಾನಗಳ ಮೂಲಕ 1,00,000 ಕೆಜಿ ನ್ಯಾನೊ ಸಾರಜನಕವನ್ನು ಶ್ರೀಲಂಕಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿಸಲಾಗಿದೆ ಎಂದು ಭಾರತೀಯ ಹೈಕಮಿಷನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. * ಶ್ರೀಲಂಕಾದಲ್ಲಿ ಪ್ರತಿ ವರ್ಷ ಸಾವಿರಾರು ಜನರು ಮೂತ್ರಪಿಂಡ ಕಾಯಿಲೆಯಿಂದಾಗಿ ಸಾವುಗಳು ಉಂಟಾಗುತ್ತಿವೆ ಎಂಬ ಕಾರಣ ನೀಡಿ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ರಾಸಾಯನಿಕ ಗೊಬ್ಬರದ ಆಮದು ಮಾಡಿಕೊಳ್ಳುವದನ್ನು ಏಪ್ರಿಲ್ನಲ್ಲಿ ನಿಷೇಧಿಸಲು ನಿರ್ಧಾರವನ್ನು ತಗೆದುಕೊಂಡಿತ್ತು.