Job Description: * ಪ್ರಸ್ತುತ ಉತ್ತರ ಪ್ರದೇಶ ರಾಜ್ಯವು ಅತ್ಯಂತ ಕಳಪೆ ಆಡಳಿತವನ್ನು ನಡೆಸುತ್ತಿರುವ ದೊಡ್ಡ ರಾಜ್ಯ ಎಂಬ ಅಪಖ್ಯಾತಿಗೆ ಪಾತ್ರವಾಗಿದೆ. * ಪ್ರಸ್ತುತ ಬೆಂಗಳೂರು ಮೂಲದ 'ಥಿಂಕ್ ಟ್ಯಾಂಕ್ ಪಬ್ಲಿಕ್ ಎಫೇರ್ಸ್ ಸೆಂಟರ್' ಸಂಸ್ಥೆಯು ರಾಜ್ಯಗಳ ಆಡಳಿತವನ್ನು ಮೌಲ್ಯಮಾಪನವನ್ನು ಸಿದ್ಧಪಡಿಸಿದೆ, ಈ ಸೂಚ್ಯಂಕದ ಪ್ರಕಾರ ಉತ್ತರ ಪ್ರದೇಶ ಸರ್ಕಾರವು ಅತ್ಯಂತ ಕಳಪೆ ಆಡಳಿತವನ್ನು ನೀಡಿದೆ ಎಂದು ತಿಳಿದುಬಂದಿದೆ. * ಈ ಸೂಚ್ಯಂಕದ ಪ್ರಕಾರ ಉತ್ತರ ಪ್ರದೇಶ ರಾಜ್ಯವು 18 ನೇ ಸ್ಥಾನವನ್ನು ಪಡೆದಿದೆ. * ಪ್ರಸ್ತುತ ರಾಜ್ಯದ ಬೆಳವಣಿಗೆ,ನೀತಿ ಮತ್ತು ಸುಸ್ಥಿರತೆ ಈ ಮೂರು ಅಂಶಗಳನ್ನು ಆಧರಿಸಿ ರಾಜ್ಯಗಳಿಗೆ ಸಮಗ್ರ ಅಂಕಗಳನ್ನು ನೀಡಲಾಗಿದೆ ಎಂದು ತಿಳಿಸಿದೆ, ಒಟ್ಟು 43 ಸೂಚಕಗಳನ್ನು ಆಧರಿಸಿ ಈ ರ್ಯಾಂಕಿಂಗ್ ನೀಡಲಾಗುತ್ತದೆ ಎಂದು ತಿಳಿಸಿದೆ. * ಇದೀಗ ಕೇರಳ ರಾಜ್ಯವು ದೇಶದಲ್ಲೇ ಅತ್ಯುತ್ತಮ ಆಡಳಿತವಿರುವ ರಾಜ್ಯಎಂಬ ಖ್ಯಾತಿಯನ್ನು ಪಡೆದುಕೊಂಡಿದೆ, ಅಷ್ಟೇ ಅಲ್ಲದೇ ಕೇರಳ ರಾಜ್ಯವು ನಂ.1 ಸ್ಥಾನವನ್ನು ಪಡೆದುಕೊಂಡಿದೆ. * ಈ ಹಿಂದೆ ಅಂದರೆ 5 ವರ್ಷಗಳಿಂದ ಪಿಎಸಿಯು ಈ ರ್ಯಾಂಕಿಂಗ್'ನ್ನು ಪ್ರಕಟಿಸಲು ಪ್ರಾರಂಭಿಸಿದೆ, ಆವಾಗಿನಿಂದಲೂ ಕೇರಳ ರಾಜ್ಯವು ಸತತವಾಗಿ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುತ್ತಾ ಬಂದಿದೆ. * ಈ ಪೈಕಿ ಕರ್ನಾಟಕ ರಾಜ್ಯವು 4 ನೇ ಸ್ಥಾನವನ್ನು ಪಡೆದುಕೊಂಡಿದೆ.