Job Description: * ಭಾರತದ ಶ್ರೀನಗರ-ಶಾರ್ಜಾ ವಿಮಾನ ಹಾರಾಟವು ಪಾಕಿಸ್ತಾನದ ವಾಯುಪ್ರದೇಶ ಬಳಸಲು ಅನುಮತಿ ಕೋರಿದೆ, ಇದೀಗ ಭಾರತವು ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನ ರಾಷ್ಟ್ರಕ್ಕೆ ಮನವಿಯನ್ನು ಮಾಡಿದೆ ಎಂದಿದ್ದಾರೆ. * ಭಾರತ ಸರ್ಕಾರವು ಶ್ರೀನಗರ- ಶಾರ್ಜಾ ನಡುವಿನ ಮಾರ್ಗದ ಸಾಮಾನ್ಯ ಪ್ರಯಾಣಿಕರ ಹಿತಾಸಕ್ತಿಯನ್ನು ಪರಿಗಣಿಸಿ ಈ ಮನವಿಯನ್ನು ಮಾಡಿದೆ ಎನ್ನಲಾಗಿದೆ. * ಇತ್ತೀಚಿಗೆ ಪಾಕಿಸ್ತಾನ ರಾಷ್ಟ್ರವು 'ಗೋ ಫರ್ಸ್ಟ್' ವಿಮಾನಯಾನ ಸಂಸ್ಥೆಯ ಶ್ರೀನಗರ-ಶಾರ್ಜಾ ನಡುವಿನ ವಿಮಾನ ಹಾರಾಟದ ವಾಯುಪ್ರದೇಶವನ್ನು ಬಳಸಲು ಅನುಮತಿ ನಿರಾಕರಿಸಿದೆ, ಈ ಕಾರಣದಿಂದ ಭಾರತ ಸರ್ಕಾರವು ಅನುಮತಿಯನ್ನು ಕೋರಲು ಮುಂದಾಗಿದೆ. * ಇದೇ ಅಕ್ಟೋಬರ್. 23 ರಿಂದ ಶ್ರೀನಗರ ಮತ್ತು ಶಾರ್ಜಾ ಮಧ್ಯೆ ನೇರ ವಿಮಾನಯಾನವನ್ನು 'ಗೋ ಫರ್ಸ್ಟ್' ವಿಮಾನಯಾನ ಸಂಸ್ಥೆಯು ಆರಂಭಿಸಿದೆ, ಇದನ್ನು 'ಗೋ ಏರ್' ಎಂದು ಕರೆಯುತ್ತಾರೆ. * ಗೋ ಫರ್ಸ್ಟ್ ಸಂಸ್ಥೆಯ ಶ್ರೀನಗರ-ಶಾರ್ಜಾ-ಶ್ರೀನಗರ ಸೇವೆಗೆ ಇದೇ ಅಕ್ಟೋಬರ್. 31 ರವರೆಗೆ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಕೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.