Job Description: * ಪ್ರಸ್ತುತ 2021 ರ ಜೈ ಭೀಮ್ ಮುಖ್ಯಮಂತ್ರಿ ಪ್ರತಿಭಾ ವಿಕಾಸ್ ಯೋಜನೆ ಅಡಿಯಲ್ಲಿ ಸರಿ ಸುಮಾರು 15,000 ವಿದ್ಯಾರ್ಥಿಗಳು ಕೋಚಿಂಗ್ ತರಗತಿಗಳಿಗೆ ದಾಖಲಾಗಿದ್ದಾರೆ. * ದೆಹಲಿ ಸರ್ಕಾರವು ಜೈ ಭೀಮ್ ಮುಖ್ಯಮಂತ್ರಿ ಪ್ರತಿಭಾ ವಿಕಾಸ್ ಯೋಜನೆಯನ್ನು ಆರಂಭಿಸಿದೆ, ಈ ಯೋಜನೆಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆರಂಭಿಸಲಾಗಿದೆ, ಮುಖ್ಯವಾಗಿ ಈ ಯೋಜನೆಯು ಆರ್ಥಿಕವಾಗಿ ಬಡ ಸಮುದಾಯದಲ್ಲಿನ ಮಕ್ಕಳಿಗಾಗಿ ಆರಂಭಿಸಲಾಗಿದೆ. * ದೆಹಲಿ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್, ಹಾಗೂ 2,500 ರೂ. ಪ್ರಯಾಣ ಸ್ಟೈಫಂಡ್ ಹಣವನ್ನು ನೀಡುತ್ತದೆ. * ವಾರ್ಷಿಕ ರೂ.8 ಲಕ್ಷಕ್ಕಿಂತ ಕಡಿಮೆ ಆದಾಯನ್ನು ಹೊಂದಿರುವ ಕುಟುಂಬವು ಈ ಯೋಜನೆಯ ಉಪಯೋಗಗಳನ್ನು ಪಡೆಯಬಹುದಾಗಿದೆ ಎಂದಿದ್ದಾರೆ. * ವಿದ್ಯಾರ್ಥಿಗಳು ಈ ಯೋಜನೆ ಅಡಿಯಲ್ಲಿ 46 ಕೋಚಿಂಗ್ ಸೆಂಟರ್ಗಳಲ್ಲಿ ಉಚಿತ ಕೋಚಿಂಗ್ ತರಗತಿಯನ್ನು ಪಡೆಯಬಹುದಾಗಿದೆ, ಹಾಗೂ UPSC, CDS, ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಪ್ರವೇಶ, ಬ್ಯಾಂಕಿಂಗ್ ಪರೀಕ್ಷೆಗಳು, ಮ್ಯಾನೇಜ್ಮೆಂಟ್ ಶಾಲೆಯ ಪರೀಕ್ಷೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನು ನೀಡಲಿದೆ. * ಈ ಹಿಂದೆ 2018 ರಲ್ಲಿ ಜೈ ಭೀಮ್ ಮುಖ್ಯಮಂತ್ರಿ ಪ್ರತಿಭಾ ವಿಕಾಸ ಯೋಜನೆಯನ್ನು ಆರಂಭಿಸಲಾಗಿದೆ, ಈ ಯೋಜನೆಯನ್ನು ಪ್ರಾರಂಭದ ವರ್ಷದಲ್ಲಿ SC ಮತ್ತು ST ವಿದ್ಯಾರ್ಥಿಗಳಿಗೆ ಮಾತ್ರ ಆರಂಭಿಸಲಾಗಿದೆ, ಮತ್ತೇ 2019 ರಲ್ಲಿ ಈ ಯೋಜನೆಗೆ OBC ಹಾಗೂ EWS ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಯೋಜನೆಯನ್ನು ಆರಂಭಿಸಲಾಯಿತು.