Job Description: * ಕೇಂದ್ರ ಸರ್ಕಾರವು ಇತ್ತೀಚಿಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 5 ರೂ. ಮತ್ತು 10 ರೂ. ಇಳಿಕೆ ಮಾಡಿದೆ, ಇದರಿಂದಾಗಿ ಸಾರ್ವಜನಿಕರ ಮುಖದಲ್ಲಿ ಸಂತಸ ಮೂಡಿದೆ. * ಈ ದಿನದವರೆಗೂ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 113.93 ರೂ. ಇತ್ತು, ಇದೀಗ ಬೆಲೆ ಇಳಿಕೆಯಾದ ನಂತರ 95.50 ರೂ. ಹಾಗೂ ಲೀಟರ್ ಡೀಸೆಲ್ ದರವು 104.50 ರೂ. ಆಗಿತ್ತು ಬೆಲೆ ಇಳಿಕೆಯಾದ ನಂತರ ಡೀಸೆಲ್ ದರವು 81.50 ರೂ.ಗೆ ಇಳಿಕೆ ಯಾದಂತಾಗಿದೆ. * ಕೇಂದ್ರ ಸರ್ಕಾರದ ಬೆನ್ನಲೇ ಕರ್ನಾಟಕ ರಾಜ್ಯ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲಿನ ಸುಂಕವನ್ನು ತಲಾ 7 ರೂ ಕಡಿಮೆಮಾಡಲು ತೀರ್ಮಾನಿಸಿದೆ, ಈ ಮಾಹಿತಿಯನ್ನು ಮುಖ್ಯ ಮಂತ್ರಿ ಬೊಮ್ಮಾಯಿ ಅವರು ಟ್ವೀಟರ್ ಮೂಲಕ ತಿಳಿಸಿದ್ದಾರೆ. * ಈ ತೈಲಗಳ ಬೆಲೆ ಇಳಿಕೆಯಿಂದಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಅಂದಾಜು 2100 ಕೋಟಿ ರೂಪಾಯಿ ಕೆ.ಎಸ್.ಟಿ ಯಿಂದ ಬೊಕ್ಕಸಕ್ಕೆ ನಷ್ಟವಾಗಲಿದೆ ಎಂದು ತಿಳಿಸಿದ್ದಾರೆ.