Job Description: * ಪ್ರಸ್ತುತ ಆಂಧ್ರಪ್ರದೇಶ ಸಚಿವ ಸಂಪುಟವು 2021 ರ ರಾಷ್ಟ್ರೀಯ ಜನಗಣತಿಯಲ್ಲಿ ಇತರ ಹಿಂದುಳಿದ ವರ್ಗಗಳನ್ನು (OBC) ನಮೂದಿಸಲು ಜಾತಿ ಆಧಾರಿತ ಜನಗಣತಿಯನ್ನು ಹಮ್ಮಿಕೊಳ್ಳಲು ಕೇಂದ್ರಕ್ಕೆ ಮನವಿ ಮಾಡಲು ತೀರ್ಮಾನಿಸಿದೆ. * ತೆಲಂಗಾಣ ಸರ್ಕಾರವು ಅಕ್ಟೋಬರ್ 8 ರಂದು ರಾಜ್ಯ ವಿಧಾನಸಭೆಯಲ್ಲಿ ಇದೇ ರೀತಿಯ ನಿರ್ಣಯಕ್ಕೆ ಅನುಮೋದನೆಯನ್ನು ನೀಡಿತ್ತು. * ಆಂಧ್ರಪ್ರದೇಶ ಸಚಿವ ಸಂಪುಟದ ದುರ್ಬಲ ವರ್ಗಗಳ ಕಲ್ಯಾಣ ಇಲಾಖೆಯು ಆರ್ಥಿಕವಾಗಿ ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಇಲಾಖೆ ರಚನೆಗೆ ಒಪ್ಪಿಗೆಯನ್ನು ನೀಡಿದೆ. * 1965 ರ ಸಿನಿಮಾಟೋಗ್ರಫಿ ಕಾಯಿದೆಗೆ ತಿದ್ದುಪಡಿಯ ಪ್ರಕಾರ ಆಂಧ್ರಪ್ರದೇಶ ಸಚಿವ ಸಂಪುಟವು ಅನುಮೋದನೆ ನೀಡಿದೆ, ಹಾಗೂ ಆಂಧ್ರಪ್ರದೇಶ ರಾಜ್ಯ ಫಿಲ್ಮ್, ಟೆಲಿವಿಷನ್ ಹಾಗೂ ಥಿಯೇಟರ್ ಡೆವಲಪ್ಮೆಂಟ್ ಕಾರ್ಪೊರೇಷನ್ ಮೂಲಕ ಸಿನಿಮಾ ಟಿಕೆಟ್ಗಳನ್ನು ವಿತರಿಸಲು ಆನ್ಲೈನ್ ಟಿಕೆಟಿಂಗ್ ಪ್ಲಾಟ್ಫಾರ್ಮ್ ನ್ನು ಒದಗಿಸುತ್ತಿದೆ. * ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಸಾಮಾಜಿಕ-ಆರ್ಥಿಕ ಜಾತಿ ಗಣತಿ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.