Job Description: * DRDO ಹಾಗೂ ಭಾರತೀಯ ವಾಯುಪಡೆ (IAF) ತಂಡವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ದೀರ್ಘ-ಶ್ರೇಣಿಯ ಬಾಂಬ್ ನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದೆ. * ಈ ದೀರ್ಘ-ಶ್ರೇಣಿಯ ಬಾಂಬ್ ನ್ನು ಒಡಿಶಾದ ಬಾಲಸೋರ್ ನಲ್ಲಿ ವೈಮಾನಿಕ ವೇದಿಕೆಯಿಂದ ಪರೀಕ್ಷಿಸಲಾಗಿದೆ. * DRDO ಪ್ರಯೋಗಾಲಯಗಳ ಸಹಾಯದಿಂದ ಹೈದರಾಬಾದ್ ನಲ್ಲಿರುವ ಸಂಶೋಧನಾ ಕೇಂದ್ರ ಇಮಾರತ್ (RCI) ಬಾಂಬ್ ನ್ನು ಅಭಿವೃದ್ಧಿಪಡಿಸಲಾಗಿದೆ. * ಸಂಶೋಧನಾ ಕೇಂದ್ರ ಇಮಾರತ್ (RCI) ಇದೊಂದು DRDO ಪ್ರಯೋಗಾಲಯವಾಗಿದೆ, ಇದು ತೆಲಂಗಾಣ ರಾಜ್ಯದ ಹೈದರಾಬಾದ್ ನಗರದಲ್ಲಿದೆ, ಈ ಪ್ರಯೋಗಾಲಯವು ಕ್ಷಿಪಣಿ ವ್ಯವಸ್ಥೆಗಳ ಸಂಶೋಧನೆ ಹಾಗೂ ಅಭಿವೃದ್ಧಿಯ ಜವಾಬ್ದಾರಿಯನ್ನು ಹೊಂದಿದೆ. * ಎಪಿಜೆ ಅಬ್ದುಲ್ ಕಲಾಂ ಅವರು ಈ ಪ್ರಯೋಗಾಲಯವನ್ನು 1988 ರಲ್ಲಿ ಸ್ಥಾಪಿಸಿದ್ದಾರೆ, ಪ್ರಸ್ತುತ ರಾಜಾ ಬಾಬು ಅವರು ಈ ಪ್ರಯೋಗಾಲಯದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. * ಇಂಟಿಗ್ರೇಟೆಡ್ ಗೈಡೆಡ್ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮ (IGMDP) ಸಮಗ್ರ ಶ್ರೇಣಿಯ ಕ್ಷಿಪಣಿಗಳ ಸಂಶೋಧನೆ ಹಾಗೂ ಅಭಿವೃದ್ಧಿಯು ಭಾರತೀಯ ರಕ್ಷಣಾ ಸಚಿವಾಲಯದ ಕಾರ್ಯಕ್ರಮವಾಗಿದೆ, ಇದನ್ನು DRDO ಮತ್ತು ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ ನಿರ್ವಹಿಸುತ್ತಿದೆ.