Job Description: * ಪ್ರಸ್ತುತ ಚೆನ್ನೈ-ಮೈಸೂರು-ಚೆನ್ನೈ ಶತಾಬ್ದಿ ಎಕ್ಸ್ಪ್ರೆಸ್ ರೈಲಿಗೆ ಇತ್ತೀಚೆಗೆ IMS ಪ್ರಮಾಣೀಕರಣವನ್ನು ನೀಡಲಾಗಿದೆ. ಈ ರೈಲು ದಕ್ಷಿಣ ರೈಲ್ವೆಯ ಮೊದಲ ಇಂಟಿಗ್ರೇಟೆಡ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್ (IMS) ಪ್ರಮಾಣೀಕೃತ ರೈಲು ಎಂದೆನಿಸಿಕೊಂಡಿದೆ. * ಈ IMS ಪ್ರಮಾಣೀಕರಣವನ್ನು ಪಡೆದ ಭಾರತೀಯ ರೈಲ್ವೆಯ ಮೊದಲ ಶತಾಬ್ದಿ ರೈಲು ಹಾಗೂ 2 ನೇ ಎಕ್ಸ್ಪ್ರೆಸ್ ರೈಲು ಕೂಡ ಇದಾಗಿದೆ. * ಪರಿಸರ ಸ್ನೇಹಿ ಸಂಪನ್ಮೂಲಗಳ ನಿರ್ವಹಣೆ ಹಾಗೂ ಉತ್ತಮ ಬಳಕೆಗಾಗಿ IMS ಪ್ರಮಾಣಪತ್ರವನ್ನು ನೀಡಲಾಗುತ್ತದೆ. * ಇಂಟಿಗ್ರೇಟೆಡ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್ (IMS) ಪ್ರಮಾಣೀಕರಣವು ಒಂದು ಸಮಗ್ರ ವಿಧಾನವಾಗಿದೆ, ಇದು ವಿವಿಧ ನಿರ್ವಹಣಾ ವ್ಯವಸ್ಥೆಯ ಮಾನದಂಡಗಳ ಅವಶ್ಯಕತೆಗಳನ್ನು ಪೂರೈಸುವ ಸಂಸ್ಥೆಯ ಕಾರ್ಯಕ್ಷಮತೆಯ ಹಲವು ಅಂಶಗಳನ್ನು ಸಂಯೋಜಿಸುತ್ತದೆ, ಅವುಗಳು: ಗುಣಮಟ್ಟ ನಿರ್ವಹಣೆಗಾಗಿ ISO 9001, ಪರಿಸರ ನಿರ್ವಹಣೆಗಾಗಿ ISO 14001, ಆರೋಗ್ಯ ಮತ್ತು ಸುರಕ್ಷತೆಗಾಗಿ ISO 45001, ಮಾಹಿತಿ ಭದ್ರತೆಗಾಗಿ ISO 27001, ಹಾಗೂ ಶಕ್ತಿ ನಿರ್ವಹಣೆಗಾಗಿ ISO 50001 ನೀಡುತ್ತದೆ. * IMS ಪ್ರಮಾಣೀಕರಣವು ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಹಾಗೂ ವೆಚ್ಚವನ್ನು ಕಡಿಮೆ ಮಾಡುತ್ತದೆ.