Job Description: * ಇತ್ತೀಚಿಗೆ 2021 ರ ಅಕ್ಟೋಬರ್. 31 ರಂದು ರೋಮ್ನಲ್ಲಿ ಜರುಗಿದ G20 ಶೃಂಗಸಭೆ ಮುಕ್ತಾಯದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪ್ಯಾನಿಷ್ ಕೌಂಟರ್ಪಾರ್ಟ್ ಪೆಡ್ರೊ ಸ್ಯಾಂಚೆಜ್ ಅವರನ್ನು ಭೇಟಿ ಮಾಡಿದರು. * ಪ್ರಸ್ತುತ ಭಾರತದ ಮೂಲಸೌಕರ್ಯ ಯೋಜನೆಗಳಲ್ಲಿ ಸ್ಪೇನ್ನಿಂದ ಹೆಚ್ಚಿನ ಹೂಡಿಕೆಗಳನ್ನು ಪ್ರಧಾನಿ ಮೋದಿ ಅವರು ಆಹ್ವಾನಿಸಿದರು, ಅಷ್ಟೇ ಅಲ್ಲದೇ ಎರಡು ದೇಶದ ನಾಯಕರು ದ್ವಿಪಕ್ಷೀಯ ಸಂಬಂಧಗಳು, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳನ್ನು ವಿನಿಮಯ ಮಾಡಿಕೊಂಡರು, ಹಾಗೂ ಸ್ಪೇನ್ನಿಂದ ವಿಮಾನ ಖರೀದಿಗೆ ಒಪ್ಪಂದಕ್ಕೆ ಸಹಿ ಹಾಕುವ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ವಿಷಯಗಳ ಬಗ್ಗೆ ಚರ್ಚಿಸಿದರು. * ಪ್ರಸ್ತುತ ಭಾರತದಲ್ಲಿನ ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್, ಗತಿ ಶಕ್ತಿ ಯೋಜನೆ, ಹಾಗೂ ಆಸ್ತಿ ನಗದೀಕರಣ ಯೋಜನೆಗಳ ಲಾಭ ಪಡೆದುಕೊಳ್ಳಲು ಸ್ಪೇನ್ ದೇಶಕ್ಕೆ ಮನವಿ ಮಾಡಿಕೊಂಡರು. * ಪ್ರಸ್ತುತ ಭಾರತವು ಏರ್ಬಸ್ ಸ್ಪೇನ್ನಿಂದ 56 'C295' ವಿಮಾನಗಳ ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದೆ, ಈ 56 ವಿಮಾನಗಳಲ್ಲಿ 40 ವಿಮಾನಗಳು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಸಹಯೋಗದೊಂದಿಗೆ 'ಮೇಡ್ ಇನ್ ಇಂಡಿಯಾ'ದ ವಿಮಾನಗಳಾಗಿರುತ್ತವೆ.