Job Description: * ಪ್ರಸ್ತುತ 74 ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್ಷಿಪ್ ನಲ್ಲಿ ಕರ್ನಾಟಕದ ಈಜುಪಟು ಸಂಭವ್ ಆರ್. ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. * ಕರ್ನಾಟಕ ಯುವ ಈಜು ಪಟುವಾದ 17 ವರ್ಷದ ಸಂಭವ್ ಆರ್. 50 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಕೇವಲ 23.65 ಸೆಕೆಂಡುಗಳಲ್ಲಿ ಗುರಿ ತಲುಪಿ ಸಾಧನೆಯನ್ನು ಮಾಡಿದ್ದಾರೆ. * ಇದೀಗ ಸಂಭವ್ ಆರ್. ಅವರು ಅತಿ ವೇಗದ ಈಜುಪಟುವಾಗಿ ಹೊರಹೊಮ್ಮಿದ್ದಾರೆ. * 50 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಮಹಾರಾಷ್ಟ್ರದ ಮಿಹಿರ್ ಆಮ್ರೆ ಅವರು 23.76 ಸೆಕೆಂಡುಗಳಲ್ಲಿ ಗುರಿ ತಲುಪಿ 2 ನೇ ಸ್ಥಾನ ಪಡೆದುಕೊಂಡಿದ್ದಾರೆ, ಅಷ್ಟೇ ಅಲ್ಲದೇ ಹೀರ್ ಶಾ ಅವರು 23.93 ಸೆಕೆಂಡುಗಳಲ್ಲಿ ಗುರಿ ತಲುಪಿ 3 ನೇ ಸ್ಥಾನ ಪಡೆದುಕೊಂಡಿದ್ದಾರೆ. * ಇತ್ತೀಚಿಗಷ್ಟೇ ನಡೆದಿರುವ 47 ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್ಶಿಪ್ ನಲ್ಲಿ ಸಂಭವ್ ಆರ್. ಅವರು ಒಟ್ಟು 4 ಚಿನ್ನದ ಪದಕಗಳನ್ನೂ ಜಯಿಸಿದ್ದಾರೆ.