Job Description: * ಪ್ರಸ್ತುತ ಭಾರತ-ಇಸ್ರೇಲ್ ವರ್ಕಿಂಗ್ ಗ್ರೂಪ್ ನ 15 ನೇ ಸಭೆಯಲ್ಲಿ, ಭಾರತ ಮತ್ತು ಇಸ್ರೇಲ್ ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಹೊಸ ಕಾರ್ಯಪಡೆಯನ್ನು ಸ್ಥಾಪನೆ ಮಾಡಲು ನಿರ್ಧರಿಸಿವೆ. * ಈ ಸಭೆಯ ಅಧ್ಯಕ್ಷತೆ ಭಾರತದ ರಕ್ಷಣಾ ಕಾರ್ಯದರ್ಶಿ ಡಾ ಅಜಯ್ ಕುಮಾರ್ ಮತ್ತು ಇಸ್ರೇಲ್ ರಕ್ಷಣಾ ಸಚಿವಾಲಯದ ನಿವೃತ್ತ ಮಹಾನಿರ್ದೇಶಕ ಮೇಜರ್ ಜನರಲ್ ಅಮೀರ್ ಎಶೆಲ್ ಅವರು ವಹಿಸಿಕೊಂಡಿದ್ದರು, ಈ ಸಭೆಯಲ್ಲಿ ಉದ್ಯಮದ ಸಹಕಾರ ಹಾಗೂ ಮಿಲಿಟರಿ ವ್ಯಾಯಾಮಗಳು ಸೇರಿದಂತೆ ಮಿಲಿಟರಿಯನ್ನು ಸೇರ್ಪಡೆಮಾಡಿಕ್ಕೊಳ್ಳುವ ಪ್ರಗತಿಯನ್ನು ಪರಿಶೀಲಿಸಿದರು. *ಭಾರತ-ಇಸ್ರೇಲ್ ದ್ವಿಪಕ್ಷೀಯ ರಕ್ಷಣಾ ಸಹಕಾರದ ಬಗೆಗಿನ ಭಾರತ ಮತ್ತು ಇಸ್ರೇಲ್ ಜಂಟಿ ಕಾರ್ಯ ಗುಂಪು ಸಮಗ್ರ ಹತ್ತು ವರ್ಷಗಳ ಮಾರ್ಗಸೂಚಿಯನ್ನು ರೂಪಿಸಲು ಒಪ್ಪಿಕೊಂಡಿದೆ. * ಈ ಜಂಟಿ ವರ್ಕಿಂಗ್ ಗ್ರೂಪ್ ಇದು ಉಭಯ ದೇಶಗಳ 'ರಕ್ಷಣಾ ಸಚಿವಾಲಯ'ದ ಸಂಸ್ಥೆಯಾಗಿದೆ, ಇದು ದ್ವಿಪಕ್ಷೀಯ ರಕ್ಷಣಾ ಸಹಕಾರದ ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸುತ್ತದೆ, ಹಾಗೂ ಇದಕ್ಕೆ ತಕ್ಕ ಮಾರ್ಗದರ್ಶನ ನೀಡುತ್ತದೆ. * ಭಾರತ-ಇಸ್ರೇಲ್ ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರವು ಭಯೋತ್ಪಾದನೆ ನಿಗ್ರಹ, ಬಾಹ್ಯಾಕಾಶ ಹಾಗೂ ಸೈಬರ್ ಭದ್ರತೆ, ಗುಪ್ತಚರ ಮಾಹಿತಿ ಹಂಚಿಕೆ ಕ್ಷೇತ್ರಗಳನ್ನು ಸೇರಿಸಲು ವಿಸ್ತರಿಸಿದೆ. * ಭಾರತವು 2017 ರಿಂದ ಇಸ್ರೇಲ್ನ ಅತಿದೊಡ್ಡ ಶಸ್ತ್ರಾಸ್ತ್ರ ಗ್ರಾಹಕವಾಗಿದೆ.