Job Description: * ಪ್ರಸ್ತುತ ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ಗವರ್ನರ್ ಆಗಿರುವ ಶಕ್ತಿಕಾಂತ ದಾಸ್ ಅವರ ಅಧಿಕಾರ ಅವಧಿಯನ್ನು ಮುಂದಿನ ಮೂರು ವರ್ಷಗಳಿಗೆ ವಿಸ್ತರಣೆ ಮಾಡಿದೆ. * ಪ್ರಸ್ತುತ ಗವರ್ನರ್ ಶಕ್ತಿಕಾಂತ ದಾಸ್ ಅವರು 2024ರ ಡಿಸೆಂಬರ್ ಕೊನೆಯವರೆಗೂ RBI'ನ ಗವರ್ನರ್ ಆಗಿ ಕಾರ್ಯವನ್ನು ನಿರ್ವಹಿಸಲಿದ್ದಾರೆ. * ಈ ಹಿಂದಿನ RBI'ನ ಗವರ್ನರ್ ಊರ್ಜಿತ್ ಪಟೇಲ್ ಅವರು ರಾಜೀನಾಮೆ ನೀಡಿದ ತದನಂತರ, 2018ರ ಡಿಸೆಂಬರ್ 11ರಂದು ಶಕ್ತಿಕಾಂತ ದಾಸ್ ಅವರನ್ನು RBI'ನ 25ನೆಯ ಗವರ್ನರ್ ಆಗಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿತ್ತು, ಇದೀಗ ಮತ್ತೇ ಮುಂದಿನ ಮೂರೂ ವರ್ಷಗಳವರೆಗೆ ಇವರ ಅಧಿಕಾರ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರವು ತಿಳಿಸಿದೆ.