Job Description: * ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA)ಗೆ ಮಹಿಳೆಯರ ಸೇರ್ಪಡೆಗೆ ಅವಕಾಶವನ್ನು ನೀಡಲಾಗಿದೆ, ಸದ್ಯ ಸಶಸ್ತ್ರ ಸೇನಾಪಡೆಗಳಲ್ಲಿ ಇರುವ ಲಿಂಗ ತಾರತಮ್ಯ ನಿವಾರಣೆಗೆ ಇದೊಂದು ಉತ್ತಮ ಹೆಜ್ಜೆಯಾಗಲಿದೆ ಎಂದು ಭೂಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ ತಿಳಿಸಿದ್ದಾರೆ. * ಭೂಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ ಅವರು ಇತ್ತೀಚಿಗೆ ಪುಣೆಯಲ್ಲಿನ ಅಕಾಡೆಮಿಯ ಕ್ಯಾಂಪಸ್ನಲ್ಲಿ 141ನೇ ಬ್ಯಾಚ್ನ ಕೆಡೆಟ್ಗಳನ್ನು ಉದ್ದೇಶಿಸಿ ಈ ವಿಷಯದ ಬಗ್ಗೆ ಚರ್ಚಿಸಿದರು. * ಈ ಹಿಂದೆ ರಕ್ಷಣಾ ಸಚಿವಾಲಯವು NDAಯಲ್ಲಿ ಮಹಿಳೆಯರನ್ನು ಸೇರ್ಪಡೆ ಮಾಡಿಕೊಳ್ಳುವ ವಿಷಯದ ಬಗ್ಗೆ ಸುಪ್ರೀಂಕೋರ್ಟ್ಗೆ ತಿಳಿಸಿತ್ತು.