Job Description: * ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅವರು ರಾಷ್ಟ್ರವ್ಯಾಪಿ ನ್ಯೂಮೊಕೊಕಲ್ ಲಸಿಕೆಯ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. * ಈ ರಾಷ್ಟ್ರವ್ಯಾಪಿ ನ್ಯೂಮೊಕೊಕಲ್ ಲಸಿಕೆಯು ಬಾಲ್ಯದಲ್ಲಿನ ಮರಣ ಪ್ರಮಾಣವನ್ನು ಸರಿ ಸುಮಾರು ಶೇ. 60ರಷ್ಟು ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ, ಅಷ್ಟೇ ಅಲ್ಲದೇ ಈ ಲಸಿಕೆಯ ಬಗೆಗಿನ ಸಂವಹನ ಹಾಗೂ ಜಾಗೃತಿ ಕುರಿತ ಪ್ಯಾಕೇಜ್ಗಳನ್ನು ಬಿಡುಗಡೆ ಮಾಡಿದ್ದಾರೆ. * ಪ್ರಸ್ತುತ ಇದೇ ಮೊದಲ ಬಾರಿಗೆ ದೇಶದಲ್ಲಿ ನ್ಯೂಮೊಕೊಕಲ್ ಲಸಿಕೆಯ ಸಾರ್ವತ್ರಿಕ ಬಳಕೆಗೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. * ಭಾರತದಲ್ಲಿ 5 ವರ್ಷದೊಳಗಿನ ಮಕ್ಕಳ ಸಾವಿಗೆ ನ್ಯೂಮೋನಿಯಾ ಮುಖ್ಯ ಕಾರಣವಾಗಿದೆ, ಇದು ನ್ಯೂಮೊಕೊಕಸ್ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ, ಸದ್ಯ ನ್ಯೂಮೋನಿಯಾದಿಂದಾಗಿ ದೇಶದಲ್ಲಿ ಶೇ. 16ರಷ್ಟು ಮಕ್ಕಳು ಮೃತಪಡುತ್ತಿದ್ದಾರೆ, ಈ ಸಾವಿನ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಈ ನ್ಯೂಮೊಕೊಕಲ್ ಲಸಿಕೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.