Job Description: * ಪ್ರಸ್ತುತ ಭಾರತೀಯ ನೌಕಾಪಡೆಯ 7ನೇ ಯುದ್ಧ ನೌಕೆ (ಪಿ1135.6)ನ್ನು ರಷ್ಯಾದ ಕಲಿನಿನ್ಗ್ರಾಡ್'ನಲ್ಲಿನ ಯಂತರ್ ಹಡಗು ನಿರ್ಮಾಣ ತಾಣ(ಶಿಪ್ಯಾರ್ಡ್)ದಲ್ಲಿ ರಷ್ಯಾದ ಭಾರತೀಯ ರಾಯಭಾರಿ ಡಿ. ಬಾಲಾ ವೆಂಕಟೇಶ್ ವರ್ಮಾರವರ ಮುಂದಾಳತ್ವದಲ್ಲಿ ಉದ್ಘಾಟಣೆ ಮಾಡಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ತಿಳಿಸಿದೆ. * ಈ ಯುದ್ಧ ನೌಕೆಗೆ 'ತುಶಿಲ್' ಎಂದು ನಾಮಕರಣ ಮಾಡಲಾಗಿದೆ, 'ತುಶಿಲ್' ಎಂಬುವದು ಸಂಸ್ಕೃತ ಪದವಾಗಿದೆ, 'ರಕ್ಷಕ ಗುರಾಣಿ' ಎಂದು ಅರ್ಥವಿದೆ ಕೇಂದ್ರ ರಕ್ಷಣಾ ಸಚಿವಾಲಯ ತಿಳಿಸಿದೆ. * ಪ್ರಸ್ತುತ ಭಾರತ ಮತ್ತು ರಷ್ಯಾ ಸರ್ಕಾರಗಳು ಈ ಹಿಂದೆ 2016ರ ಅಕ್ಟೋಬರ್'ನಲ್ಲಿ 4 ಹೆಚ್ಚುವರಿ ಪಿ1135.6 ವರ್ಗದ ಯುದ್ಧ ನೌಕೆಗಳನ್ನು ನಿರ್ಮಿಸಲು ಪರಸ್ಪರ ಒಪ್ಪಿಗೆ ನೀಡಿ ಜಂಟಿಯಾಗಿ ಸಹಿ ಹಾಕಿದ್ದವು. * ಈ ಒಪ್ಪಂದದ ಪ್ರಕಾರ ತಲಾ ಎರಡು ಯುದ್ಧ ನೌಕೆಗಳನ್ನು ರಷ್ಯಾ ಮತ್ತು ಭಾರತ ದೇಶಗಳಲ್ಲಿ ನಿರ್ಮಾಣ ಮಾಡುವುದಾಗಿ ಒಪ್ಪಿಕೊಂಡಿದ್ದವು.