Job Description: * ಭಾರತೀಯ ವಿಮಾನಯಾನ ಕ್ಷೇತ್ರದಲ್ಲಿ ಹೆಸರಾದ ಫ್ಲೈಬಿಗ್ ತಾನು ಕೊಡಮಾಡುವ ವೈಮಾನಿಕ ಸೇವೆಗೆ ತನ್ನ ಪ್ರಯಾಣಿಕರಿಗೆ ಟಿಕೆಟ್ಗಳನ್ನು ಒದಗಿಸುವ ದೃಷಿಯಿಂದ IRCTC ಜೊತೆಗೆ ಒಪ್ಪಂದ ಮಾಡಿಕೊಂಡಿದೆ. * 'ನಿಮ್ಮ ದೇಶವನ್ನು ನೋಡಿ' ಅಭಿಯಾನದಡಿ ದೇಶದ ಈಶಾನ್ಯ ಪ್ರದೇಶದ ಜೀವವೈವಿಧ್ಯ ಹಾಗೂ ಸಂಸ್ಕೃತಿಯನ್ನು ಪ್ರಮೋಟ್ ಮಾಡುವುದು ಈ ಒಪ್ಪಂದದ ಉದ್ದೇಶವಾಗಿದೆ, ಇದೇ ವೇಳೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಈಶಾನ್ಯ ಪ್ರದೇಶದಲ್ಲಿ Contact ಹಾಗೂ Connectivity ಗೆ ಬಲ ನೀಡುವ ಉದ್ದೇಶವನ್ನೂ ಸಹ ಈ ಒಪ್ಪಂದ ಹೊಂದಿದೆ. * ಭಾರತ ಸರ್ಕಾರದ ಪ್ರಾದೇಶಿಕ ವಿಮಾನಯಾನ ಸಂಪರ್ಕ ಯೋಜನೆಯಾದ 'ಉಡಾನ್'ನ ಅಡಿ ಫ್ಲೈಬಿಗ್ ತನ್ನ ಚಟುವಟಿಕೆಗಳನ್ನು ಜನವರಿ 2021 ರಿಂದ ಆರಂಭಿಸಿದೆ. * ಈ ಫ್ಲೈಬಿಗ್ ಅನ್ನು ದೇಶದ ಈಶಾನ್ಯದ ಪ್ರಮುಖ ಕೇಂದ್ರಗಳಾದ ಗೌಹಾಟಿ, ಶಿಲ್ಲಾಂಗ್, ಡಿಬ್ರೂಘಡ, ಅಗರ್ತಲಾಗಳಿಗೆ ವಿಮಾನಯಾನ ಸಂಪರ್ಕ ತಲುಪಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ.