Job Description: * ರಷ್ಯಾದಿಂದ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳ ಮೇಲೆ ಭಾರತದ ಅವಲಂಬನೆಯಲ್ಲಿ ಗಣನೀಯವಾಗಿ ಇಳಿಕೆ ಕಂಡು ಬಂದಿದ್ದರೂ ಸಹ ರಷ್ಯಾದ ಉಪಕರಣಗಳಿಲ್ಲದೆ ಭಾರತೀಯ ಸೇನೆಯು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ಸಂಸ್ಥೆ ಹೇಳಿದೆ. * ರಷ್ಯಾದೊಂದಿಗೆ ಭಾರತವು ಹೆಚ್ಚಿನ ಒಡನಾಟವನ್ನು ಸಹಿಸದ ಅಮೆರಿಕ ಕೆಂಗಣ್ಣಿನಿಂದ ನೋಡುತ್ತಿದ್ದು ಈ ರೀತಿಯಾದ ಹೇಳಿಕೆಯನ್ನು ನೀಡುತ್ತಿದೆ. * ಭಾರತ ಪ್ರಸ್ತುತ ಸ್ವಾವಲಂಬಿಯಾಗಿ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದರೂ ಸಹ ರಷ್ಯಾದೊಂದಿಗೆ ರಕ್ಷಣಾ ಒಪ್ಪಂದವನ್ನು ಮಾಡಿಕೊಂಡು ಹಲವು ಭಾರೀ ಪ್ರಮಾಣದ ಉಪಕರಣಗಳನ್ನು ಖರೀದಿಸಿವೆ. * 2015 ರ ನಂತರ ಆಮದು ಮಾಡಿಕೊಳ್ಳುವಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದ್ದರೂ ಸಹ ರಷ್ಯಾ ಕೂಡ ಆಕರ್ಷಕ ದರದಲ್ಲಿ ಸುಧಾರಿತ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಸರಬರಾಜು ಮಾಡುವುದನ್ನು ಮುಂದುವರೆಸಿದೆ.