Job Description: * ಯುನೈಟೆಡ್ ಸ್ಟೇಟ್ಸ್ ಮೊದಲ ಪಾಸ್ಪೋರ್ಟ್'ನ್ನು 'X' ಲಿಂಗ ಮಾರ್ಕರ್ನೊಂದಿಗೆ ನೀಡಿದೆ, ಪ್ರಸ್ತುತ ಇದು ಪುರುಷ ಅಥವಾ ಮಹಿಳೆ ಎಂದು ಪರಿಗಣಿಸಲಾಗದ ಜನರ ಹಕ್ಕುಗಳನ್ನು ಗುರುತಿಸುವಲ್ಲಿ ಹೊಸ ಮೈಲಿಗಲ್ಲನ್ನು ಎತ್ತಿತೋರಿದೆ. * ಫೋರ್ಟ್ ಕಾಲಿನ್ಸ್'ನ ಇಂಟರ್ಸೆಕ್ಸ್ ಕಾರ್ಯಕರ್ತ ಡಾನಾ ಝೈಮ್ ಅವರ ಹೋರಾಟದ ನಂತರ ಈ ಕ್ರಮವನ್ನು ಕೈಗೊಳ್ಳಲಗಿದೆ ಎಂದು ತಿಳಿಸಿದ್ದಾರೆ. * ಝೈಮ್ ಅವರು ಗಂಡು ಅಥವಾ ಹೆಣ್ಣ ಎಂಬ ಆಯ್ಕೆ ಮಾಡುವ ಮೂಲಕ ಝೈಮ್ ಲಿಂಗದ ಬಗ್ಗೆ ಸುಳ್ಳು ಹೇಳುವ ಅಗತ್ಯವಿಲ್ಲದ ಪಾಸ್ಪೋರ್ಟ್ ಪಡೆಯಲು 2015 ರಿಂದ US ಸ್ಟೇಟ್ ಡಿಪಾರ್ಟ್ಮೆಂಟ್ನೊಂದಿಗೆ ಕಾನೂನುಬದ್ಧವಾಗಿ ಹೋರಾಟ ನಡೆಸುತಿದ್ದರು. * ಯುಎಸ್'ನಲ್ಲಿ, 'ಸಲಿಂಗಕಾಮಿ, ದ್ವಿಲಿಂಗಿ ಮತ್ತು ಟ್ರಾನ್ಸ್ಜೆಂಡರ್ (LGBT) ಹಕ್ಕುಗಳು ವಿಕಸನಗೊಂಡಿವೆ. ಯುನೈಟೆಡ್ ಸ್ಟೇಟ್ಸ್'ನ ಎಲ್ಲಾ 50 ರಾಜ್ಯಗಳು 1962 ರವರೆಗೆ ಸಲಿಂಗ ಲೈಂಗಿಕ ಚಟುವಟಿಕೆಯನ್ನು ಅಪರಾಧ ಎಂದು ಪರಿಗಣಿಸಿದ್ದವು, ಆದರೆ 2003 ರಲ್ಲಿ ಯುಎಸ್ ಸಲಿಂಗ ಲೈಂಗಿಕ ಚಟುವಟಿಕೆಯ ವಿರುದ್ಧ ಉಳಿದಿರುವ ಎಲ್ಲಾ ಕಾನೂನುಗಳನ್ನು ತಗೆದುಹಾಕಿತು, ಅಷ್ಟೇ ಅಲ್ಲದೇ 2015 ರ ಹೊತ್ತಿಗೆ ಇವರು ಯುಎಸ್'ನ 50 ರಾಜ್ಯಗಳಲ್ಲಿ ಮದುವೆಯಾಗುವ ಹಕ್ಕನ್ನು ಪಡೆದುಕೊಂಡರು.