Job Description: * ಇದೇ ಅಕ್ಟೋಬರ್. 27 ರಂದು 'ಕೃಷಿ ಉಡಾನ್ 2.0 ಯೋಜನೆಯನ್ನು ನಾಗರಿಕ ವಿಮಾನಯಾನ ಸಚಿವಾಲಯವು ಆರಂಭಿಸಿದೆ. * ಈ ಕೃಷಿ ಉಡಾನ್ 2.0 ಯೋಜನೆ ಅಡಿಯಲ್ಲಿ, ಗುಡ್ಡಗಾಡು, ಬುಡಕಟ್ಟು ಮತ್ತು ಈಶಾನ್ಯ ಪ್ರದೇಶಗಳ ವಿಮಾನ ನಿಲ್ದಾಣಗಳಲ್ಲಿ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡಲಾಗುತ್ತದೆ, ಇದರಿಂದಾಗಿ ಕೃಷಿ ಉತ್ಪನ್ನಗಳನ್ನು ಸಾಗಿಸಲು ರೈತರಿಗೆ ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ. * ಕೇಂದ್ರ ಸರ್ಕಾರವು ಕೃಷಿ ಉಡಾನ್ ಯೋಜನೆಯನ್ನು 2020 ರ ಸೆಪ್ಟೆಂಬರ್'ನಲ್ಲಿ ಆರಂಭಿಸಿದೆ. * ಕೇಂದ್ರ ಸರ್ಕಾರವು ಈ ಕೃಷಿ ಉಡಾನ್ 2.0 ಅಡಿಯಲ್ಲಿ ಆಯ್ದ ವಿಮಾನ ನಿಲ್ದಾಣಗಳಲ್ಲಿನ ವಿಮಾನ ನಿಲ್ದಾಣದ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಲು ಚಿಂತನೆ ನಡೆಸಿದೆ. * 2022 ರ ವೇಳೆಗೆ ಈ ಯೋಜನೆಯಡಿಯಲ್ಲಿ ಅಗರ್ತಲಾ, ದಿಬ್ರುಗಢ, ಶ್ರೀನಗರ, ಹುಬ್ಬಳ್ಳಿ, ದಿಮಾಪುರ್, ಜೋರ್ಹತ್, ಇಂಫಾಲ್, ಸಿಲ್ಚಾರ್, ಲಿಲಾಬರಿ, ಲಕ್ನೋ, ತಿರುಪತಿ, ತೇಜ್ಪುರ್, ತಿರುಪತಿ ಮತ್ತು ಟುಟಿಕೋರಿನ್ನಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಕಾರ್ಗೋ ಟರ್ಮಿನಲ್ಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಕೃಷಿ ಉಡಾನ್ 2.0 ಯೋಜನೆಯಡಿಲ್ಲಿ ಕೃಷಿ ಉತ್ಪನ್ನಗಳ ಸಾಗಣೆಗೆ ಸಂಬಂಧಿಸಿದಂತೆ ಮಧ್ಯಸ್ಥಗಾರರಿಗೆ ಮಾಹಿತಿ ನೀಡಲು ನೆರವಾಗುವ ನಿಟ್ಟಿನಲ್ಲಿ ಇ-ಕುಶಾಲ್ ಆನ್ಲೈನ್ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.