Job Description: * ಸಿಲಿಕಾನ್ ಸಿಟಿ ಬೆಂಗಳೂರು ದೇಶದಲ್ಲೇ ಮೊದಲ ಬಾರಿಗೆ ಅಂಚೆ ಕಚೇರಿಯಲ್ಲಿ ಇ-ಬೈಕ್ಗಳ ಮೂಲಕ ಪೋಸ್ಟ್'ಗಳನ್ನು ವಿತರಣೆ ಮಾಡಿದೆ . * ಪ್ರಸ್ತುತ ಕರ್ನಾಟಕ ರಾಜ್ಯದ ಬೆಂಗಳೂರಿನ ಜೆ.ಪಿ ನಗರದ ಉಪ ಅಂಚೆ ಕಚೇರಿ ಸಿಬ್ಬಂದಿಗಳಿಗೆ ಎಲೆಕ್ಟ್ರಿಕ್ ಬೈಕ್ ನೀಡಲಾಗಿದೆ, ಅಲ್ಲಿರುವ ಪೋಸ್ಟ್ ಮ್ಯಾನ್ಗಳು ಇ-ಬೈಕ್ಗಳ ಮೂಲಕ ಪೋಸ್ಟ್ ಗಳನ್ನು ಡೆಲಿವರಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. * ಬೆಂಗಳೂರಿನ ಜೆ.ಪಿ ನಗರದ ಉಪ ಅಂಚೆ ಕಚೇರಿಯಲ್ಲಿ 15 ಪೋಸ್ಟ್ ಮೆನ್ ಹಾಗೂ ಪೋಸ್ಟ್ ವುಮೆನ್ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ, ಇದೀಗ ಇವರುಗಳು ಇ-ಬೈಕ್ಗಳ ಮೂಲಕವೇ ಪೋಸ್ಟ್ ಗಳನ್ನು ವಿತರಣೆ ಮಾಡುತ್ತಿದ್ದಾರೆ. * ಅಂಚೆ ದಿನಾಚರಣೆಯ ವಾರದ ಪ್ರಯುಕ್ತ ಅಂದರೆ ಅಕ್ಟೋಬರ್. 14ರಂದು ಇ-ಪೋಸ್ಟ್'ನ್ನು ಆರಂಭಿಸಿದ್ದೇವೆ ಎಂದು ಬೆಂಗಳೂರು ವಲಯದ ಜನರಲ್ ಪೋಸ್ಟ್ ಮಾಸ್ಟರ್ ಎಲ್.ಕೆ ಡ್ಯಾಶ್ ಅವರು ತಿಳಿಸಿದ್ದಾರೆ.